

ಮುಂಬೈ: ಬಾಲಿವುಡ್ನ ಬಿಗ್ಬಿ ಅಮಿತಾಭ್ ಬಚ್ಚನ್, ಚಿತ್ರರಂಗದಲ್ಲಿ ನಟನಾಗಿ 52 ವರ್ಷಗಳನ್ನು ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಈ ಐದು ದಶಕಗಳ ವೃತ್ತಿಜೀವನದಲ್ಲಿ ಮಾಡಿದ ಮಹತ್ವದ ಸಿನಿಮಾಗಳ ಕೊಲಾಜ್ನ್ನು ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ತಮಿಳು ನಟ ಅಜಿತ್ ಮನೆಗೆ ಕಿಡಿಗೇಡಿಯಿಂದ ಬಾಂಬ್ ಬೆದರಿಕೆ!
ಅಮಿತಾಭ್ ಬಚ್ಚನ್ ಅವರು ಹಿಂದಿ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟಿದ್ದು 1969ರಲ್ಲಿ ಕೆ.ಎ. ಅಬ್ಬಾಸ್ ನಿರ್ದೇಶನದ 'ಸಾಥ್ ಹಿಂದೂಸ್ತಾನಿ' ಚಿತ್ರದ ಮೂಲಕ ಅವರು ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಆ ಚಿತ್ರ 1969ರ ನವೆಂಬರ್ನಲ್ಲಿ ಬಿಡಗುಡೆಯಾಗಿತ್ತಾದರೂ, ಚಿತ್ರೀಕರಣ ಪ್ರಾರಂಭಾವಾಗಿದ್ದು ಜೂನ್ ಒಂದರಂದು ಹೇಳಲಾಗುತ್ತಿದೆ. ಹೀಗೆ ಮೊದಲ ಬಾರಿಗೆ ಬಣ್ಣ ಹಚ್ಚಿದ ದಿನವನ್ನು ಅಮಿತಾಬ್ ಸೋಷಿಯಲ್ ಮೀಡಿಯಾ ಮೂಲಕ ನೆನಪಿಸಿಕೊಂಡಿದ್ದಾರೆ.
ಈ ಕುರಿತು ಪೋಸ್ಟ್ ಹಾಕಿರುವ ಅವರು, '52 ವರ್ಷಗಳು ಹೇಗೆ ಹೋಯಿತೋ ಎಂಬುದೇ ಗೊತ್ತಾಗುತ್ತಿಲ್ಲ. ಈಗಲೂ ನೆನಸಿಕೊಂಡರೆ ಆಶ್ಚರ್ಯವಾಗುತ್ತದೆ' ಎಂದು ಹೇಳುವುದರ ಜತೆಗೆ, ತಮ್ಮ ಮಹತ್ವದ ಚಿತ್ರಗಳ ಕೊಲಾಜ್ ಶೇರ್ ಮಾಡಿಕೊಂಡಿದ್ದಾರೆ. ಈ ಕೊಲಾಜ್ನಲ್ಲಿ ಅಮಿತಾಭ್ ಅಭಿನಯದ 'ಅಭಿಮಾನ್', 'ದೀವಾರ್', 'ಜಂಜೀರ್', 'ಕೂಲಿ', 'ಖುದಾ ಗವಾ', 'ಮೊಹಬ್ಬತೇ', 'ಕಭಿ ಖುಷಿ ಕಭಿ ಘಮ್', 'ಪೀಕು', 'ಸರ್ಕಾರ್' ಮುಂತಾದ ಹಲವು ಚಿತ್ರಗಳ ಕೊಲಾಜ್ ಇದೆ. ಅಮಿತಾಭ್ ಅವರು 52 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಸಂಭ್ರಮಿಸುವುದರ ಜತೆಗೆ, ತಮ್ಮ ಮೆಚ್ಚಿನ ನಟನಿಗೆ ಶುಭ ಹಾರೈಸಿದ್ದಾರೆ.
ಕಳೆದ ವರ್ಷ ಬಿಡುಗಡೆಯಾದ 'ಗುಲಾಬೋ ಸಿತಾಬೋ', ಅಮಿತಾಭ್ ಅಭಿನಯದ ಕೊನೆಯ ಚಿತ್ರವಾಗಿದೆ. 'ಚೆಹ್ರೆ', 'ಮೇ ಡೇ', 'ಬ್ರಹ್ಮಾಸ್ತ್ರ', 'ಜುಂಡ್' ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದು, ಈ ಚಿತ್ರಗಳು ಬಿಡುಗಡೆಯಾಗಬೇಕಿವೆ.