

ಮುಂಬೈ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವೈವಾಹಿಕ ಜೀವನದಲ್ಲಿ ವಿಚ್ಛೇದನ ವದಂತಿಯ ಸುದ್ದಿಗಳ ನಡುವೆ ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan), ಸಂದರ್ಶನವೊಂದರಲ್ಲಿ ತಮ್ಮ ಮಾಜಿ ಗೆಳತಿ ಕುರಿತು ಮಾತನಾಡಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಈ ಹಿಂದೆ ಸಲ್ಮಾನ್ ಖಾನ್ ಜತೆ ಡೇಟಿಂಗ್ನಲ್ಲಿದ್ದರು, ಸಲ್ಮಾನ್ ಮತ್ತು ಐಶ್ವರ್ಯಾ ಜೋಡಿಯು ತಮ್ಮ ಸಂಬಂಧವನ್ನು 2002 ರಲ್ಲಿ ಕೊನೆಗೊಳಿಸಿದ್ದಾರೆ ಎಂದು ಅಂದಿನಿಂದ ಇಂದಿನವರೆಗೂ ಬಾಲಿವುಡ್ ಅಂಗಳಲ್ಲಿ ಪಿಸು-ಪಿಸು ಮಾತುಗಳು ಕೇಳಿಸುತ್ತಲೇ ಇದೆ. ಆದರೆ, ಇವರಿಬ್ಬರೂ ತಮ್ಮ ಡೇಟಿಂಗ್ ಬಗ್ಗೆ ಎಲ್ಲಿಯೂ ಮಾತನಾಡದಿದ್ದರೂ, ಸಂದರ್ಶನವೊಂದರಲ್ಲಿ ಸಲ್ಮಾನ್ ಐಶ್ವರ್ಯಾ ಮದುವೆಯ ಬಗ್ಗೆ ಹಂಚಿಕೊಂಡಿದ್ದಾರೆ.
ಐಶ್ವರ್ಯ ರೈ ಅವರಿಗೆ ನಿಂದನೆ ಮಾಡಿದ್ದಾರೆ ಎಂಬ ಆರೋಪ ನಿಮ್ಮ ಮೇಲೆ ಇದೆ. ಇದಕ್ಕೆ ಏನಾಂತಿರಾ ಎಂದು ಸಂದರ್ಶಕ ಕೇಳುತ್ತಾರೆ. ಉತ್ತರಿಸಿದ ಸಲ್ಮಾನ್ ನಯವಾಗಿ, ನಿಮ್ಮ ವೈಯಕ್ತಿಕ ಜೀವನ ನಿಮ್ಮ ಪರ್ಸನಲ್. ನಾನು ಇದನ್ನು ಸಮರ್ಥಿಸಲು ಹೊರಟರೆ, ಅವರು (ಐಶ್ವರ್ಯಾ) ನಮ್ಮ ಜೀವನದ ಭಾಗವಾಗಿದ್ದರು ಎಂದು ನಂಬುತ್ತಾರೆ. ಹೀಗಾಗಿ, ಈ ಆರೋಪ ಸುಳ್ಳು ಎಂದರು.
ಸಂದರ್ಶನದಲ್ಲಿ ಮುಂದುವರೆದು ಮಾತನಾಡಿದ ಸಲ್ಮಾನ್, ಅವಳು ಬೇರೆಯವರ ಹೆಂಡತಿ, ದೊಡ್ಡ ಕುಟುಂಬದಲ್ಲಿ ಮದುವೆಯಾಗಿದ್ದಾರೆ. ನನ್ನ ಪ್ರಕಾರ ಅಭಿಷೇಕ್ ಒಳ್ಳೆಯ ವ್ಯಕ್ತಿ, ಆಕೆ ಅಭಿ ಜತೆ ಮದುವೆಯಾಗಿರುವುದು ನನಗೆ ತುಂಬಾ ಖುಷಿ ತಂದಿದೆ. ಇದನ್ನು ನಾನು ಮಾತ್ರವಲ್ಲ ಮಾಜಿ ಗೆಳತೆಯ ಬಗ್ಗೆ ಎಲ್ಲರೂ ಉತ್ತಮವಾದದ್ದನ್ನೆ ಬಯಸುತ್ತಾರೆ ಎಂದಿದ್ದಾರೆ, ಈ ವಿಡಿಯೋ ಇದೀಗ ವೈರಲ್ ಆಗಿದೆ, (ಏಜೆನ್ಸೀಸ್).