ವೀಕೆಂಡ್ ಕಳೆಯಿರಿ ಅಂಬರೀಶ್, ಸುದೀಪ್ ಜತೆಗೆ

ZEE Final
Published on

ಜೀ ಕನ್ನಡ ವಾಹಿನಿಯು ತನ್ನ ಜನಪ್ರಿಯ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡುತ್ತಿರುವುದು ಗೊತ್ತಿರುವ ವಿಷಯವೇ. ಅದರಲ್ಲೂ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದ ಮರುಪ್ರಸಾರ ಈಗಾಗಲೇ ಕಳೆದ ವಾರದಿಂದ ಪ್ರಾರಂಭವಾಗಿದೆ. ಕಳೆದ ವಾರ ದರ್ಶನ್ ಮತ್ತು ಜಗ್ಗೇಶ್ ಅವರ ಎಪಿಸೋಡ್‌ಗಳನ್ನು ಪ್ರಸಾರ ಮಾಡಲಾಗಿತ್ತು. ಈ ವಾರ ಅಂಬರೀಶ್ ಮತ್ತು ಸುದೀಪ್ ಅವರ ಕಂತುಗಳು ಪ್ರಸಾರವಾಗಲಿದೆ.

ಹೌದು, ಇದೇ ಏಪ್ರಿಲ್ 18ರ ಶನಿವಾರ ಮಧ್ಯಾಹ್ನ ಒಂದು ಗಂಟೆಗೆ ‘ರೆಬಲ್ ಸ್ಟಾರ್’ ಅಂಬರೀಶ್ ಅವರ ಎಪಿಸೋಡ್ ಪ್ರಸಾರವಾದರೆ, ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ‘ಕಿಚ್ಚ’ ಸುದೀಪ್ ಅವರ ಎಪಿಸೋಡ್ ಪ್ರಸಾರವಾಗಲಿದೆ. ಈ ಎರಡೂ ಎಪಿಸೋಡ್‌ಗಳು ಮೊದಲ ಬಾರಿಗೆ ಪ್ರಸಾರವಾದಾಗ, ಸಾಕಷ್ಟು ಮೆಚ್ಚುಗೆ ಪಡೆದಿದ್ದವು. ಅಂಬರೀಶ್ ಹಾಗೂ ಸುದೀಪ್ ಅವರು ನಡೆದು ಬಂದ ಹಾದಿಯನ್ನು ತಿಳಿದುಕೊಳ್ಳುವುದಕ್ಕೆ ಮತ್ತೊಮ್ಮೆ ಈ ಎಪಿಸೋಡುಗಳನ್ನು ನೋಡಬಹುದು.

ಈಗಾಗಲೇ ಜೀ ಕನ್ನಡದಲ್ಲಿ ‘ಸರಿಗಮಪ - ಸೀಸನ್ 15’, ‘ಡ್ರಾಮಾ - ಸೀಸನ್ 1’, ‘ಕಾಮಿಡಿ ಕಿಲಾಡಿಗಳು - ಸೀಸನ್ 1’, ‘ಚೋಟಾ ಚಾಂಪಿಯನ್ - ಸೀಸನ್ 1’ ಮುಂತಾದ ಜನಪ್ರಿಯ ರಿಯಾಲಿಟಿ ಶೋಗಳಲ್ಲದೆ, ಕೆಲವು ಜನಪ್ರಿಯ ಧಾರಾವಾಹಿಗಳ ಮರುಪ್ರಸಾರ ಪ್ರಾರಂಭವಾಗಿದೆ. ಈ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡವರು ಮತ್ತೊಮ್ಮೆ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net