

ಇಷ್ಟು ದಿನ ಸಿದ್ಧವಾದ ಚಿತ್ರಗಳನ್ನು ನಿಗದಿತ ಮೊತ್ತ ಕೊಟ್ಟು ಖರೀದಿಸಿ, ವೇದಿಕೆ ಕಲ್ಪಿಸಿಕೊಡುತ್ತಿದ್ದ ಅಮೆಜಾನ್ ಪ್ರೖೆಮ್ ಬುಧವಾರ ಬ್ರೇಕಿಂಗ್ ಸುದ್ದಿಯೊಂದನ್ನು ನೀಡಿದೆ.
ಅಕ್ಷಯ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ‘ರಾಮಸೇತು’ ಚಿತ್ರದ ನಿರ್ವಣದಲ್ಲಿ ಅಮೆಜಾನ್ ಪ್ರೖೆಂ ಸಂಸ್ಥೆ ಕೈ ಜೋಡಿಸಿದೆ. ಈ ಮೊದಲು ಅಕ್ಷಯ್ ಒಡೆತನದ ‘ಕೇಪ್ ಆಫ್ ಗುಡ್ ಫಿಲಂಸ್’, ‘ಅಬಂಡನ್ಶಿಯಾ ಎಂಟರ್ಟೈನ್ವೆುಂಟ್’ ಮತ್ತು ‘ಲೈಕಾ ಪ್ರೊಡಕ್ಷನ್ಸ್’ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದವು.
ಇದೀಗ ಅಮೆಜಾನ್ ಸಹ ಈ ಚಿತ್ರದ ನಿರ್ವಣದಲ್ಲಿ ಪಾಲುದಾರಿಕೆ ಹೊಂದಿದೆ. ಅಭಿಷೇಕ್ ಶರ್ಮಾ ನಿರ್ದೇಶನದಲ್ಲಿ ಸಿದ್ಧವಾಗಲಿರುವ ಈ ಚಿತ್ರ, ಭಾರತ ಮತ್ತು ಶ್ರೀಲಂಕಾ ನಡುವಿನ ಪೌರಾಣಿಕ ಹಿನ್ನೆಲೆಯುಳ್ಳ ರಾಮ ಸೇತುವನ್ನು ಆಧರಿಸಿ ತಯಾರಾಗುತ್ತಿದೆ. ‘ಸತ್ಯವೋ ಮಿಥ್ಯವೋ’ ಎಂಬ ಟ್ಯಾಗ್ಲೈನ್ ಸಹ ಇಲ್ಲಿರುವುದರಿಂದ, ಏನೆಲ್ಲ ಅಂಶಗಳನ್ನು ಈ ಸಿನಿಮಾ ಮೂಲಕ ಹೇಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದಲ್ಲಿ
ಅಕ್ಷಯ್ಗೆ ಜಾಕ್ಲೀನ್ ಫರ್ನಾಂಡೀಸ್ ಜೋಡಿಯಾಗಿ ನಟಿಸಲಿದ್ದಾರೆ. ಇದಷ್ಟೇ ಅಲ್ಲದೆ, ಥಿಯೇಟರ್ನಲ್ಲಿ ಬಿಡುಗಡೆಯಾದ ನಂತರ ‘ರಾಮ್ೇತು’ ಚಿತ್ರ ಅಮೆಜಾನ್ ಪ್ರೖೆಮ್ಲ್ಲಿ ಎಕ್ಸ್ ಕ್ಲೂಸಿವ್ ಸ್ಟ್ರೀಮಿಂಗ್ ಪಾರ್ಟ್ನರ್ ಆಗಿರಲಿದೆ. ಈ ಚಿತ್ರದ ಮುಹೂರ್ತ ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಡೆಯಲಿದೆ. -ಏಜೆನ್ಸೀಸ್