ಇರ್ಫಾನ್​ಗಾಗಿ ಒಂದಾದ ನಟಿಯರು; ಸೋಶಿಯಲ್ ಮೀಡಿಯಾದಲ್ಲಿ ‘ಅಂಗ್ರೇಜಿ ಮೀಡಿಯಂ’ ಪ್ರಮೋಶನ್

HINDI
Published on

2017ರಲ್ಲಿ ಬಾಲಿವುಡ್​ನಲ್ಲಿ ಹೆಚ್ಚು ಸದ್ದು ಮಾಡಿದ್ದ ‘ಹಿಂದಿ ಮೀಡಿಯಂ’ನ ಮುಂದಿನ ಭಾಗ ‘ಅಂಗ್ರೇಜಿ ಮೀಡಿಯಂ’ ಸದ್ಯದಲ್ಲೇ ರಿಲೀಸ್ ಆಗುತ್ತಿದ್ದು, ಅದಕ್ಕೆ ಬಾಲಿವುಡ್​ನ ಸ್ಟಾರ್ ನಟಿಯರೆಲ್ಲರೂ ಸಾಥ್ ನೀಡುತ್ತಿದ್ದಾರೆ.

ಇರ್ಫಾನ್ ಖಾನ್, ಕರೀನಾ ಕಪೂರ್, ರಾಧಿಕಾ ಮದನ್ ಸೇರಿದಂತೆ ಬಹು ತಾರಾಗಣವಿರುವ ಈ ಚಿತ್ರವನ್ನು ಎಲ್ಲರೂ ಬಂದು ನೋಡಿ ಎಂದು ನಟಿಯರಾದ ಅನುಷ್ಕ ಶರ್ವ, ಕತ್ರಿನಾ ಕೈಫ್, ಆಲಿಯಾ ಭಟ್, ಜಾಹ್ನವಿ ಕಪೂರ್, ಕೃತಿ ಸನೋನ್ ಸೇರಿದಂತೆ ಸಾಕಷ್ಟು ಮಂದಿ ನಟಿಯರು ಪ್ರಮೋಶನ್ ಮಾಡುತ್ತಿದ್ದಾರೆ.

ಅದಕ್ಕೆ ಕಾರಣವೂ ಇದೆ. ಸಿನಿಮಾದ ಮುಖ್ಯ ಪಾತ್ರಧಾರಿ ಇರ್ಫಾನ್ ಖಾನ್ ಸದ್ಯ ಅನಾರೋಗ್ಯ ಪೀಡಿತರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಮೋಶನ್​ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಟಿಯರೆಲ್ಲರೂ ಈ ಚಿತ್ರದ ಪರವಾಗಿ ನಿಂತಿದ್ದಾರೆ.

‘ಲವ್ ಫಾರ್ ಅಂಗ್ರೇಜಿ’ ಎಂಬ ಹ್ಯಾಷ್ ಟ್ಯಾಗ್ ಹಾಕಿಕೊಂಡು ಆ ಚಿತ್ರದ ಮ್ಯೂಸಿಕ್​ಗೆ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟವಾದ ವಿಡಿಯೋವನ್ನು ಮಾಡಿ ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಅಂಗ್ರೇಜಿ ಮೀಡಿಯಂ’ ಇದೇ 13 ಕ್ಕೆ ದೇಶಾದ್ಯಂತ ರಿಲೀಸ್ ಆಗಲಿದೆ. ಈಗಾಗಲೇ ಈ ಚಿತ್ರದ ಟ್ರೇಲರ್ ಮತ್ತು ಪೋಸ್ಟರ್​ಗಳು ವೈರಲ್ ಆಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net