ಕೇವಲ 15 ನಿಮಿಷವಷ್ಟೇ!; ಆಲಿಯಾ ಆರ್​ಆರ್​ಆರ್​ನಲ್ಲಿ ಕಾಣಿಸುವುದಿಷ್ಟೇ ಹೊತ್ತು...

Alia
Published on

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾದಲ್ಲಿ ಆಲಿಯಾ ನಟಿಸಿರುವ ವಿಷಯ ಗೊತ್ತೇ ಇದೆ. ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ. ಅದೇನೆಂದರೆ, ಆಲಿಯಾ ತಮ್ಮ ವೃತ್ತಿಜೀವನದಲ್ಲೇ ಇಷ್ಟೊಂದು ಚಿಕ್ಕ ಪಾತ್ರವನ್ನು ಯಾವ ಚಿತ್ರದಲ್ಲೂ ಮಾಡಿರಲಿಲ್ಲವಂತೆ. ಅಂದರೆ, ಈ ಚಿತ್ರದಲ್ಲಿ ಆಲಿಯಾ ಕೇವಲ 15 ನಿಮಿಷ ಮಾತ್ರ ತೆರೆಮೇಲೆ ಕಾಣಿಸುತ್ತಾರೆ! ಈವರೆಗೂ ಸಾಕಷ್ಟು ಸಿನಿಮಾಗಳಲ್ಲಿ ಆಲಿಯಾ ಕಾಣಿಸಿಕೊಂಡಿದ್ದರಾದರೂ, ಪೂರ್ಣ ಪ್ರಮಾಣದ ನಾಯಕಿಯಾಗಿಯೇ ಕಂಡಿದ್ದೇ ಹೆಚ್ಚು.

ಇದೀಗ ಮೊದಲ ಬಾರಿ ದೊಡ್ಡ ಚಿತ್ರದಲ್ಲಿ ಅತೀ ಸಣ್ಣ ಪಾತ್ರವೊಂದನ್ನು ಆಲಿಯಾ ಮಾಡಿದ್ದಾರೆ. ಈವರೆಗೂ ಚಿತ್ರತಂಡ ಈ ವಿಚಾರವನ್ನು ಬಹಿರಂಗಪಡಿಸಿರಲಿಲ್ಲ. ಕೇವಲ ಆಲಿಯಾ ಮಾತ್ರವಲ್ಲ ಅಜಯ್ ದೇವಗನ್ ಪಾತ್ರವೂ ತೆರೆಮೇಲೆ ಕಾಣಿಸುವುದು ಕೇವಲ 8 ನಿಮಿಷ ಮಾತ್ರ! ‘ನನ್ನ ಸಿನಿಮಾ ಕೆರಿಯರ್ ಆರಂಭವಾದಾಗ, ಸಂಜಯ್ ಲೀಲಾ ಬನ್ಸಾಲಿ ಮತ್ತು ರಾಜಮೌಳಿ ಅವರ ಜತೆ ಕೆಲಸ ಮಾಡುವ ಆಸೆ ಇತ್ತು. ಹೀಗಿರುವಾಗ ರಾಜಮೌಳಿ ಆಫರ್ ಸಿಕ್ಕಾಗ ಪಾತ್ರ ಎಷ್ಟೊತ್ತು ತೆರೆಮೇಲೆ ಬರಲಿದೆ ಎಂಬುದನ್ನು ಕೇಳಿರಲಿಲ್ಲ. ಸುಮ್ಮನೆ ನಟಿಸಿದೆಯಷ್ಟೇ’ ಎಂದಿದ್ದಾರೆ ಆಲಿಯಾ. ಜ. 7ಕ್ಕೆ ಒಟ್ಟು ಐದು ಭಾಷೆಗಳಲ್ಲಿ ‘ಆರ್​ಆರ್​ಆರ್’ ಚಿತ್ರ ತೆರೆಗೆ ಬರುತ್ತಿದೆ. ಜೂ.ಎನ್​ಟಿಆರ್, ರಾಮ್ರಣ್ ತೇಜ ಮುಖ್ಯಭೂಮಿಕೆಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net