

ಮುಂಬೈ: ಬಾಲಿವುಡ್ನ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕುರಿತು ಸಾಕಷ್ಟು ವದಂತಿಗಳು ಈಗಾಗಲೇ ಚಾಲ್ತಿಯಲ್ಲಿವೆ. ಇಬ್ಬರೂ ಪ್ರೀತಿಯಲ್ಲಿದ್ದಾರೆ. ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲ ಸುದ್ದಿಗಳು ಕೇಳಿಬರುತ್ತಿವೆ. ಒಟ್ಟಿಗೆ ಸಿನಿಮಾ ಸಹ ಮಾಡುತ್ತಿರುವುದರಿಂದ ಇಬ್ಬರ ಮೇಲೆ ಬಹುತೇಕರ ಕಣ್ಣು ನೆಟ್ಟಿದೆ. ಈ ನಡುವೆ ಈ ಜೋಡಿಯ ಆಪ್ತತೆ ಬಗ್ಗೆ ಮತ್ತೊಂದು ಪುರಾವೆ ಸಿಕ್ಕಿದೆ. ಅದೇನೆಂದರೆ, ರಣಬೀರ್ ವಾಸವಾಗಿರುವ ಅಪಾರ್ಟ್ಮೆಂಟ್ನಲ್ಲಿಯೇ ಆಲಿಯಾ ಮನೆ ಖರೀದಿಸಿದ್ದಾರೆ.
ಹೌದು, ಈಗಾಗಲೇ ಮುಂಬೈನ ಜುಹು ಮತ್ತು ಲಂಡನ್ನಲ್ಲಿರುವ ಕೊವೆಂಟ್ ಗಾರ್ಡನ್ನಲ್ಲಿ ಆಲಿಯಾ ಮನೆಹೊಂದಿದ್ದಾರೆ. ಇದೀಗ ಬಾಂದ್ರಾದಲ್ಲಿನ ವಾಸ್ತು ಪಿಲಿ ಹಿಲ್ ಕಾಂಪ್ಲೆಕ್ಸ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಮನೆ ಖರೀದಿ ಮಾಡಿದ್ದಾರೆ. ಆ ಮನೆಯ ಮೊತ್ತ ಬರೋಬ್ಬರಿ 32 ಕೋಟಿ!
ಇದನ್ನೂ ಓದಿ: ಪೀಕು ಸಿನಿಮಾದ ರಿಮೇಕ್ನಲ್ಲಿ ತ್ರಿಷಾ
ಆಲಿಯಾ ಖರೀದಿ ಮಾಡಿರುವ ಪ್ಲ್ಯಾಟ್ 5ನೇ ಫ್ಲೋರ್ನಲ್ಲಿದ್ದರೆ, ರಣಬೀರ್ ಮನೆ 7ನೇ ಫ್ಲೋರ್ನಲ್ಲಿದೆ. 2460 ಚದರ ಅಡಿ ವಿಸ್ತೀರ್ಣದ ಮನೆ ಇದಾಗಿದೆ. ಇನ್ನೊಂದು ವಿಶೇಷ ಏನೆಂದರೆ, ರಣಬೀರ್ ಕಪೂರ್ ಮನೆಯ ಒಳಾಂಗಣ ವಿನ್ಯಾಸ ಮಾಡಿದ್ದ ಗೌರಿ ಖಾನ್, ಇದೀಗ ಆಲಿಯಾ ಭಟ್ ಮನೆಯ ಇಂಟೀರಿಯರ್ ಡಿಸೈನ್ ಮಾಡಲಿದ್ದಾರೆ. ಇತ್ತೀಚೆಗಷ್ಟೇ ಈ ಮನೆಯ ಗೃಹ ಪ್ರವೇಶವನ್ನೂ ನೆರವೇರಿಸಲಾಗಿದೆ. (ಏಜೆನ್ಸೀಸ್)