ರಣಬೀರ್- ಆಲಿಯಾ ಮತ್ತಷ್ಟು ಹತ್ತಿರ!

Alia Bhatt -Ranbir Kapoor
Published on

ಬಾಲಿವುಡ್​ನ ಪ್ರೇಮಿಗಳೆಂದೇ ಬಿಂಬಿತ ವಾಗಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮತ್ತಷ್ಟು ಹತ್ತಿರವಾಗಿದ್ದಾರೆ.

ಅಂದರೆ, ರಣಬೀರ್ ಇರುವ ಅಪಾರ್ಟ್​ವೆುಂಟ್​ನಲ್ಲೇ ಆಲಿಯಾ ಸಹ ಮನೆ ಖರೀದಿ ಮಾಡಿ, ಕುತೂಹಲಕ್ಕೆ ಒಗ್ಗರಣೆ ಹಾಕಿದ್ದಾರೆ. ಹೌದು, ಈಗಾಗಲೇ ಮುಂಬೈನ ಜುಹು ಮತ್ತು ಲಂಡನ್ನಿನ ಕೊವೆಂಟ್ ಗಾರ್ಡನ್​ನಲ್ಲಿ ಆಲಿಯಾ ಮನೆ ಹೊಂದಿದ್ದಾರೆ. ಇದೀಗ ಬಾಂದ್ರಾದಲ್ಲಿನ ವಾಸ್ತು ಪಿಲಿ ಹಿಲ್ ಕಾಂಪ್ಲೆಕ್ಸ್​ನಲ್ಲಿ ರುವ ಅಪಾರ್ಟ್​ವೆುಂಟ್​ನಲ್ಲಿ ಆಲಿಯಾ ಮನೆ ಖರೀದಿ ಮಾಡಿದ್ದಾರೆ.

ಅಚ್ಚರಿ ವಿಚಾರ ಏನೆಂದರೆ, ಆ ಮನೆಯ ಮೊತ್ತ ಬರೋಬ್ಬರಿ 32 ಕೋಟಿ ರೂಪಾಯಿ! ಅಪಾರ್ಟ್​ವೆುಂಟ್​ನಲ್ಲಿ ಆಲಿಯಾ ಮನೆ 5ನೇ ಪ್ಲೋರ್​ನಲ್ಲಿದ್ದರೆ, ರಣಬೀರ್ ಮನೆ ಏಳನೇ ಮಹಡಿಯಲ್ಲಿದೆ. ಒಟ್ಟು 2460 ಚದರ ಅಡಿಯ ಈ ಮನೆಯ ಗೃಹಪ್ರವೇಶವೂ ಇತ್ತೀಚೆಗಷ್ಟೇ ನೆರವೇರಿದ್ದು, ಕರಣ್ ಜೋಹಾರ್, ರಣಬೀರ್ ಸೇರಿ ಕೆಲವು ಆಪ್ತರು ಆಗಮಿಸಿದ್ದರು. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಆರಂಭಿಸಿರುವ ಇಂಟಿರಿಯರ್ ಡಿಸೈನಿಂಗ್ ಸಂಸ್ಥೆ ಈ ಮನೆಯ ಒಳಾಂಗಣ ವಿನ್ಯಾಸ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net