‘ಆರ್​ಆರ್​ಆರ್​’ ಶೂಟಿಂಗ್​ಗೆ ಆಲಿಯಾ ಸಿದ್ಧತೆ: ಅದಕ್ಕೂ ಮೊದಲು ‘ಗಂಗೂಬಾಯಿ..’ ಚಿತ್ರೀಕರಣದಲ್ಲೂ ಭಾಗಿ

Alia
Published on

ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಸುದೀರ್ಘ ಎರಡು ತಿಂಗಳ ಬಳಿಕ ಮತ್ತೆ ಶೂಟಿಂಗ್​ಗೆ ಮರಳುತ್ತಿದ್ದಾರೆ. ಕರೊನಾ ಸೋಂಕಿನ ಪ್ರಕರಣ ಇಳಿಕೆ ಆಗುತ್ತಿದ್ದಂತೆ, ಒಪ್ಪಿಕೊಂಡ ಎರಡು ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಆ ಎರಡು ಸಿನಿಮಾಗಳು ಇಷ್ಟೊತ್ತಿಗಾಗಲೇ ಬಿಡುಗಡೆಗೆ ಸಿದ್ಧವಾಗಿರುತ್ತಿದ್ದವು. ಆದರೆ ಲಾಕ್​ಡೌನ್ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿವೆ.

ಈ ಮೊದಲೇ ಸುದ್ದಿಯಾದಂತೆ ಮೊದಲಿಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಸಿನಿಮಾದಲ್ಲಿ ಆಲಿಯಾ ಭಾಗವಹಿಸಲಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಗಂಗೂಬಾಯಿ ಕಥೈವಾಡಿ ಚಿತ್ರದ ಹಾಡೊಂದರ ಶೂಟಿಂಗ್​ ಬಾಕಿ ಉಳಿದಿದ್ದು, ಆ ಕೆಲಸವನ್ನು ಮೊದಲಿಗೆ ಮುಗಿಸಿಲಿದ್ದಾರೆ. ಅದಾದ ಬಳಿಕ ಆರ್​ಆರ್​ಆರ್​ ತಂಡ ಸೇರಿಕೊಳ್ಳಲಿದ್ದಾರೆ.

ಗಂಗೂಬಾಯಿ ಚಿತ್ರದ ಕೇವಲ ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಅದು ಮುಗಿಯುತ್ತಿದ್ದಂತೆ ನೇರವಾಗಿ ಜುಲೈ 1ರಿಂದ ಹೈದರಾಬಾದ್​ ನಲ್ಲಿ ರಾಜಮೌಳಿ ನಿರ್ದೇಶನದ ಆರ್​ಆರ್​​ಆರ್​ ತಂಡ ಕೂಡಿಕೊಳ್ಳಲಿದ್ದಾರೆ. ಅಲ್ಲಿಂದ ಮುಂದಿನ ಎರಡು ವಾರಗಳ ಕಾಲ ಶೂಟಿಂಗ್ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net