ಫೆ.17ಕ್ಕೆ ಬಿಡುಗಡೆಯಾಗಲಿದೆ ಅಕ್ಷಿತ್​ - ಅದಿತಿ ಅಭಿನಯದ 'ಖೆಯೊಸ್​'

Chaos 1 - Final
Published on

ಬೆಂಗಳೂರು: ಶಶಿಕುಮಾರ್​ ಅವರ ಮಗ ಅಕ್ಷಿತ್​ ಕಳೆದ ವರ್ಷವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ, ಅದ್ಯಾಕೋ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ. ಅಂದುಕೊಂಡಂತೆ ಬಿಡುಗಡೆಯಾದ ಎರಡೂ ಚಿತ್ರಗಳೂ ಗೆಲ್ಲಲಿಲ್ಲ. ಈಗ ಅಕ್ಷಿತ್​ ಅಭಿನಯದ ಮೂರನೆಯ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ 'ಖೆಯೊಸ್​'.

'ಖೆಯೊಸ್​' ಚಿತ್ರವನ್ನು ದಿ ಬ್ಲಾ ಪೆಬ್ಬಲ್​ ಎಂಟರ್​ಟೈನ್​ಮೆಂಟ್​ನಡಿ ಪಾರುಲ್​ ಅಗರವಾಲ್​ ಹಾಗೂ ಹೇಮಚಂದ್ರ ರೆಡ್ಡಿ ಜಂಟಿಯಾಗಿ ನಿರ್ಮಿಸಿದ್ದಾರೆ. ಈಗಾಗಲೇ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿರುವ ಈ ಚಿತ್ರವು ಫೆ.17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಶೇಷವೆಂದರೆ, ಈ ಚಿತ್ರದಲ್ಲಿ ಅಕ್ಷಿತ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಶಶಿಕುಮಾರ್​ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ತಂದೆ-ಮಗ ಜತೆಯಾಗಿ ನಟಿಸಿರುವ ಮೊದಲ ಚಿತ್ರ ಇದಾಗಿದೆ. ಜತೆಗೆ ಆರ್ ಕೆ ಚಂದನ್, ಸಿದ್ದು ಮೂಲಿಮನಿ ಮುಂತಾದವರು ನಟಿಸಿದ್ದಾರೆ.

ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ ಇದಾಗಿದ್ದು, ಆಕ್ಷನ್, ಸಸ್ಪೆನ್ಸ್, ಥ್ರಿಲ್​ ಜತೆಗೆ ಮರ್ಡರ್​ ಮಿಸ್ಟ್ರಿ ಸಹ ಇದ್ದು, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ ಡಾ.ಜಿ.ವಿ. ಪ್ರಸಾದ್​. ಈ ಚಿತ್ರಕ್ಕೆ ವಿಜಯ್​ ಹರಿತ್ಸ ಅವರ ಸಂಗಿತವಿದ್ದು, ದಿಲೀಪ್ ಕುಮಾರ್ ಮತ್ತು ಸಂದೀಪ್ ವಳ್ಳೂರಿ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net