ಧುರಂಧರ್​ ಖ್ಯಾತಿ ಅಕ್ಷಯ್ ಖನ್ನಾಗೆ ಆಸ್ಕರ್ ಸಿಕ್ಕರೂ ತಿರಸ್ಕರಿಸುತ್ತಾರೆ.. ಕರಣ್ ಜೋಹರ್ ಹೇಳಿಕೆಯ ವಿಡಿಯೋ ವೈರಲ್

Akshaye Khanna
Akshaye Khanna
Published on

ಪ್ರಮುಖ ಮುಖ್ಯಾಂಶಗಳು

  • ಕರಣ್ ಜೋಹರ್ ಮತ್ತು ಅಕ್ಷಯ್ ಖನ್ನಾ ಹಳೆಯ ವಿಡಿಯೋ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ.
  • ಬಾಲಿವುಡ್​ನ ಧುರಂಧರ್ (Dhurandhar) ಚಿತ್ರದಿಂದ ಅಕ್ಷಯ್ ಖನ್ನಾ ಅವರ ಖ್ಯಾತಿ ಗಗನಕ್ಕೇರಿದೆ.
ಮುಂಬೈ: ಬಾಲಿವುಡ್​ನ ಧುರಂಧರ್ (Dhurandhar) ಚಿತ್ರದಿಂದ ಅಕ್ಷಯ್ ಖನ್ನಾ ಅವರ ಖ್ಯಾತಿ ಗಗನಕ್ಕೇರಿದೆ. 2025ರ ಬ್ಲಾಕ್‌ಬಸ್ಟರ್ ಸ್ಪೈ ಥ್ರಿಲ್ಲರ್‌ನಲ್ಲಿ ಅವರು ರೆಹಮಾನ್ ದಾಕೈತ್ (ಪಾಕಿಸ್ತಾನಿ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿ) ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದು, ರಣವೀರ್ ಸಿಂಗ್ ಅವರ ಲೀಡ್ ರೋಲ್‌ಗೆ ಸಮಾನವಾಗಿ ಸೀನ್ ಸ್ಟೀಲ್ ಮಾಡಿದ್ದಾರೆ. 'ಧುರಂಧರ್' ಸಿನಿಮಾ ಸಕ್ಸೆಸ್​​ನಲ್ಲಿ ತೇಲಾಡುತ್ತಿರುವ ಅಕ್ಷಯ್ ಖನ್ನಾ ಅವರ ಹಳೆಯ ವಿಡಿಯೋವೊಂದು ವೈರಲ್​ ಆಗಿದೆ.
ಹೌದು, ಕರಣ್ ಜೋಹರ್ ಮತ್ತು ಅಕ್ಷಯ್ ಖನ್ನಾ (Akshaye Khanna) ಅವರ ಹಳೆಯ ತಮಾಷೆಯ ವಿಡಿಯೋ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ.
2017ರಲ್ಲಿ 'ಇತ್ತೆಫಾಕ್' ಸಿನಿಮಾ ಪ್ರಮೋಷನ್ ಸಮಯದಲ್ಲಿ ಕರಣ್ ಜೋಹರ್ ತಮಾಷೆಯಾಗಿ ಹೇಳಿದ್ದರು. ಅಕ್ಷಯ್ ಖನ್ನಾ ಅವರು ತುಂಬಾ ರಿಕ್ಲೂಸಿವ್ (ಒಂಟಿಯಾಗಿ ಇರುವ) ವ್ಯಕ್ತಿ. ಅವರು ಸೋಮವಾರದಿಂದ ಶುಕ್ರವಾರ ಬಾಂಬೆಯಲ್ಲಿ ಇದ್ದು, ವೀಕೆಂಡ್‌ಗೆ ಆಳಿಬಾಗ್‌ಗೆ ಹೋಗಿ ಬಿಡುತ್ತಾರೆ. "ಒಂದು ವೇಳೆ ಶನಿವಾರ ಆಸ್ಕರ್ ಪ್ರಶಸ್ತಿ ಸಿಕ್ಕರೂ ಅವರು ಬಂದು ತಗೊಳ್ಳೋದಿಲ್ಲ, ಏಕೆಂದರೆ ವೀಕೆಂಡ್‌ನಲ್ಲಿ ಆಳಿಬಾಗ್‌ನಲ್ಲಿರುತ್ತಾರೆ!" ಅಂತ ಕರಣ್ ಜೋಕ್ ಮಾಡಿದ್ದರು. ಶಾರುಖ್ ಖಾನ್ ಕೂಡ ಅಲ್ಲಿದ್ದು, "Why the hell are you like this, Akshaye?" ಅಂತ ತಮಾಷೆಯಾಗಿ ಕೇಳಿದ್ದರು. ಇದೀಗ ಈ ತಮಾಷೆಯ ವಿಡಿಯೋ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಇತ್ತೀಚೆಗೆ ಅಕ್ಷಯೇ ಖನ್ನಾ ಅವರ 'ಧುರಂಧರ್' ಸಿನಿಮಾ ಸಕ್ಸೆಸ್ ಮತ್ತು ಅವರ ಪರ್ಫಾರ್ಮೆನ್ಸ್‌ಗೆ "ಆಸ್ಕರ್ ಡಿಸರ್ವ್" ಅಂತ ಫ್ಯಾನ್ಸ್ ಹೇಳುತ್ತಿರುವುದರಿಂದ ಮತ್ತೆ ವೈರಲ್ ಆಗಿದೆ.
ಡಿಸೆಂಬರ್ 5ಕ್ಕೆ ರಿಲೀಸ್ ಆದ ಈ ಚಿತ್ರ ಡಿಸೆಂಬರ್ 16ರವರೆಗೆ ಭಾರತದಲ್ಲಿ 410-470 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದು, ವರ್ಲ್ಡ್‌ವೈಡ್ 590-600 ಕೋಟಿ ದಾಟಿದೆ. ಈ ಚಿತ್ರದಿಂದ ಅಕ್ಷಯ್ ಅವರು ಮತ್ತೆ ಬಾಲಿವುಡ್‌ನ ಟಾಪ್ ಅಂಡರ್‌ರೇಟೆಡ್ ಟ್ಯಾಲೆಂಟ್ ಆಗಿ ಮರುಜನ್ಮ ಪಡೆದಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net