ಅಕ್ಷಯ್ ಕುಮಾರ್ ತಮ್ಮ ಮುಂಬರುವ ಬಹುನಿರೀಕ್ಷಿತ ಚಿತ್ರ 'ವೆಲ್ಕಮ್ ಟು ದಿ ಜಂಗಲ್' ಬಿಡುಗಡೆಗಾಗಿ ಸಖತ್ ಎದುರುನೋಡುತ್ತಿದ್ದಾರೆ. ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಮತ್ತು ಫಿಲ್ಮ್ ಮೇಕರ್ ಅಹ್ಮದ್ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ, ಸಾರ್ವಕಾಲಿಕ ಬ್ಲಾಕ್‌ಬಸ್ಟರ್ ಕಾಮಿಡಿ ಸರಣಿಯಾದ 'ವೆಲ್ಕಮ್' ಫ್ರಾಂಚೈಸ್‌ನ ಅಧಿಕೃತ ಮೂರನೇ ಕಂತು ಆಗಿದೆ. ಈ ಚಿತ್ರದಲ್ಲಿ ಅಕ್ಷಯ್ ಜೊತೆಗೆ ಸುನೀಲ್ ಶೆಟ್ಟಿ, ದಿಶಾ ಪಟಾನಿ, ಜಾಕ್ವೆಲಿನ್ ಫರ್ನಾಂಡಿಸ್, ಅರ್ಷದ್ ವಾರ್ಸಿ, ಜಾಕಿ ಶ್ರಾಫ್, ಪರೇಶ್ ರಾವಲ್, ರವೀನಾ ಟಂಡನ್, ಲಾರಾ ದತ್ತ, ಫರೀದಾ ಜಲಾಲ್, ಜಾನಿ ಲಿವರ್, ಶ್ರೇಯಸ್ ತಲ್ಪಾಡೆ, ತುಷಾರ್ ಕಪೂರ್, ರಾಜ್‌ಪಾಲ್ ಯಾದವ್, ಕೃಷ್ಣ ಅಭಿಷೇಕ್, ಕಿಕು ಶಾರದಾ, ದಲೇರ್ ಮೆಹಂದಿ, ಅಫ್ತಾಬ್ ಶಿವದಾಸನಿ ಮುಂತಾದವರು ನಟಿಸಿದ್ದಾರೆ.