ಟ್ವಿಂಕಲ್ ಖನ್ನಾ ಅವರನ್ನು ಆಸ್ಪತ್ರೆಗೆ ಕರೆದೊಯ್ದ ಅಕ್ಷಯ್, ಕಾರಣ ಕರೊನಾ ಮಾತ್ರವಲ್ಲ!

akshay
Published on

ಮುಂಬೈ: ಬಾಲಿವುಡ್‌ನ ಹಿರಿಯ ನಟ ಅಕ್ಷಯ್ ಕುಮಾರ್ ತಮ್ಮ ಪತ್ನಿ ಟ್ವಿಂಕಲ್ ಖನ್ನಾ ಅವರನ್ನು ಭಾನುವಾರ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಟ್ವಿಂಕಲ್ ಖನ್ನಾ, ಚಾಂದಿನಿ ಚೌಕ್‌ನಿಂದ ಬಂದ ನನ್ನ ಕಾರಿನ ಚಾಲಕ ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ ಮುಖಕ್ಕೆ ಮಾಸ್ಕ್ ಧರಿಸಿ ಕಾರು ಚಲಾಯಿಸುತ್ತಿರುವ ತಮ್ಮ ಪತಿಯ ಚಿತ್ರವನ್ನೂ ಪ್ರಕಟಿಸಿದ್ದಾರೆ.

ಟ್ವಿಂಕಲ್ ಖನ್ನಾ ಅವರು ದಿಢೀರನೆ ಆಸ್ಪತ್ರೆಗೆ ಹೋಗಿದ್ದೇಕೆ? ಅವರಿಗೆ ಏನಾದರೂ ಕರೊನಾ ವೈರಸ್ ಸೋಂಕು ತಗುಲಿತೇ ಎಂಬ ಪ್ರಶ್ನೆಗಳು ಮೂಡಬಹುದು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಟ್ವಿಂಕಲ್, ಅಯ್ಯಯ್ಯೋ! ನಾನು ಆಸ್ಪತ್ರೆಗೆ ಹೋಗಲು ಕರೊನಾ ಕಾರಣವಲ್ಲ.... ಬದಲಿಗೆ ಕಾಲು ಮುರಿತಕ್ಕೆ ಒಳಗಾಗಿದ್ದ ಕಾರಣ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೋವಿಡ್ 19 ನಿಯಂತ್ರಣಕ್ಕೆ ಲಾಕ್‌ಡೌನ್ ೋಷಿಸಿರುವ ಹಿನ್ನೆಲೆಯಲ್ಲಿ ರಸ್ತೆಗಳೆಲ್ಲವೂ ಖಾಲಿ ಖಾಲಿಯಾಗಿದ್ದು, ಆಸ್ಪತ್ರೆಗೆ ತುಂಬಾ ಬೇಗನೆ ಹೋಗಿ ಬರಲು ಸಾಧ್ಯವಾಯಿತು. ಆದರೆ ಪಾರಿವಾಳ ಮತ್ತು ಕಾಗೆಗಳ ಗುಂಪು ಅಲ್ಲಲ್ಲಿ ಕಂಡು ಬಂದವು. ಇದು ಹರ್ಷದ ನೋಟ ಒದಗಿಸಿತು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net