'ಬೆಲ್​ ಬಾಟಮ್​' ಮುಗೀತು; 'ಪೃಥ್ವಿರಾಜ್​' ಆದ ಅಕ್ಷಯ್​ ...

Prithviraj - Akshay Kumar
Published on

ಮುಂಬೈ: ಲಾಕ್​ಡೌನ್​ ತೆರವಾಗುತ್ತಿದ್ದಂತೆಯೇ, ಅಕ್ಷಯ್​ ಕುಮಾರ್​ ತಮ್ಮ ತಂಡದೊಂದಿಗೆ ಸ್ಕಾಟ್​ಲ್ಯಾಂಡ್​ಗೆ ಹೋಗಿ 'ಬೆಲ್​ ಬಾಟಮ್​' ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿ ಬಂದಿದ್ದಾರೆ. ಮುಂದೇನು ಎಂಬ ಪ್ರಶ್ನೆಯೇ ಇಲ್ಲ. ಅಕ್ಷಯ್​ ಇದೀಗ 'ಪೃಥ್ವಿರಾಜ್​' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.

ಪೃಥ್ವಿರಾಜ್​ ಚೌಹಾನ್​ ಕುರಿತು ಡಾ. ಚಂದ್ರಪ್ರಕಾಶ್​ ದ್ವಿವೇದಿ ನಿರ್ದೇಶಿಸುತ್ತಿರುವ ಸಿನಿಮಾ 'ಪೃಥ್ವಿರಾಜ್​'. ಯಶ್​ರಾಜ್​ ಫಿಲಂಸ್​ನಡಿ ಆದಿತ್ಯ ಚೋಪ್ರಾ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಇಷ್ಟರಲ್ಲಿ ಮುಗಿದು, ದೀಪಾವಳಿಗೆ ಚಿತ್ರ ಬಿಡುಗಡೆಯಾಗಬೇಕಿತ್ತು.

ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರತಂಡದ ಪ್ಲಾನ್​ಗಳೆಲ್ಲಾ ತಲೆಕೆಳಗಾದವು. ಇದೀಗ ಶನಿವಾರದಿಂದ ಚಿತ್ರೀಕರಣ ಪ್ರಾರಂಭವಾಗಿದ್ದು, ಮುಂಬೈನ ಯಶ್​ರಾಜ್​ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ವಿಶೇಷ ಸೆಟ್​ಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.

ಈ ಹಂತದ ಚಿತ್ರೀಕರಣದಲ್ಲಿ ಅಕ್ಷಯ್​ ಕುಮಾರ್​ ಜತೆಗೆ ಸೋನು ಸೂದ್​ ಸಹ ಭಾಗವಹಿಸಿದ್ದಾರಂತೆ. ಇನ್ನು ಅಕ್ಟೋಬರ್​ 13ರ ನಂತರ ಮಾನುಷಿ ಚಿಲ್ಲರ್ ಚಿತ್ರತಂಡ ಸೇರ್ಪಡೆಯಾಗಲಿದ್ದು, ದೀಪಾವಳಿ ನಂತರ ಸಂಜಯ್​ ದತ್​ ಸಹ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net