ಅಕ್ಷಯ್​ ಕುಮಾರ್ ‘ಲಕ್ಷ್ಮೀ ಬಾಂಬ್​’ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್​

laxmmi-bomb-release-date-1200
Published on

ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆ ನಿಭಾಯಿಸಿರುವ ‘ಲಕ್ಷ್ಮೀ ಬಾಂಬ್​‘ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಆರು ತಿಂಗಳಿಂದ ಲಾಕ್​ಡೌನ್ ಘೋಷಣೆ ಆಗಿದ್ದರಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡು, ಸಿನಿಮಾ ಕ್ಷೇತ್ರಕ್ಕೆ ಭಾರೀ ನಷ್ಟವಾಗಿತ್ತು. ಬಳಿಕ ಒಂದಷ್ಟು ಮಂದಿ ನೇರವಾಗಿ ಓಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಿ ಗೆದ್ದರು. ಇದೀಗ ಅದೇ ಹಾದಿಯಲ್ಲಿ ಅಕ್ಷಯ್​ ಕುಮಾರ್ ಸಹ ಆಗಮಿಸುತ್ತಿದ್ದು, ಲಕ್ಷ್ಮೀ ಬಾಂಬ್​ ಚಿತ್ರದ ಬಿಡುಗಡೆಗೆ ದಿನಾಂಕವೂ ಫಿಕ್ಸ್ ಆಗಿದೆ.

ಈ ಮೊದಲು ‘ಲಕ್ಷ್ಮೀ ಬಾಂಬ್​’ ಸಿನಿಮಾ ನೇರವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಮಾತುಗಳನ್ನು ತಳ್ಳಿಹಾಕಿ ನೇರವಾಗಿ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ರಾಘವ್​ ಲಾರೆನ್ಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ತಮಿಳಿನ ಕಾಂಚನಾ ಚಿತ್ರದ ರಿಮೇಕ್​. ಮೂಲ ಸಿನಿಮಾದಲ್ಲಿ ರಾಘವ್ ನಿಭಾಯಿಸಿದ್ದ ಸಿನಿಮಾವನ್ನು ಹಿಂದಿಯಲ್ಲಿ ಅಕ್ಷಯ್​ ಕುಮಾರ್ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ. ಡಿಸ್ನಿ ಪ್ಲಸ್​ ಹಾಟ್​ಸ್ಟಾರ್ ವೇದಿಕೆಯಲ್ಲಿ ನವೆಂಬರ್​ 9ಕ್ಕೆ ಈ ಸಿನಿಮಾ ಬಿಡುಗಡೆ ಆಗಲಿದೆ.

ಸುಶಾಂತ್ ಸಿಂಗ್​ ರಜಪೂತ್​ ನಟನೆಯ ದಿಲ್​ ಬೇಚಾರ, ಆಲಿಯಾ ಭಟ್​ ನಟನೆಯ ಸಡಕ್​ 2 ಸಿನಿಮಾಗಳು ಈಗಾಗಲೇ ಹಾಟ್​ಸ್ಟಾರ್​ನಲ್ಲಿ ತೆರೆಕಂಡಿವೆ. ಅಜಯ್​ ದೇವಗನ್​ ನಾಯಕತ್ವದ ಭುಜ್​, ಅಭಿಷೇಕ್​ ಬಚ್ಚನ್​ ಅವರ ಬಿಗ್ ಬುಲ್ ಸಹ ಇನ್ನೇನು ಬಿಡುಗಡೆ ದಿನಾಂಕವನ್ನು ಘೋಷಿಸಿಕೊಳ್ಳಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net