ಚಿತ್ರೀಕರಣ ಮುಗಿಸಿದ ನಟ ಅಕ್ಷಯ್

Akshay Kumara vvani
Published on

ಗುಂಡ್ಲುಪೇಟೆ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಗುರುವಾರ ಬಂಡೀಪುರದಲ್ಲಿ ‘ಮ್ಯಾನ್ ವರ್ಸಸ್ ವೈಲ್ಡ್’ ಖ್ಯಾತಿಯ ಬೇರ್ ಗ್ರಿಲ್ಸ್ ಜತೆ ಚಿತ್ರೀಕರಣದಲ್ಲಿ ಪಾಲ್ಗೊಂಡರು.

ಮೂರು ದಿನಗಳಿಂದ ಬಂಡೀಪುರದಲ್ಲಿ ನಡೆಯು ತ್ತಿರುವ ಶೂಟಿಂಗ್​ನಲ್ಲಿ ಜ. 28ರಂದು ಸೂಪರ್​ಸ್ಟಾರ್ ರಜನಿಕಾಂತ್ ಭಾಗವಹಿಸಿದ್ದರು. ಇದೀಗ ನಟ ಅಕ್ಷಯ್ಕುಮಾರ್ ಗ್ರಿಲ್ಸ್ ಜತೆಯಾಗಿದ್ದು, ‘ಇನ್ ಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್’ ಎನ್ನುವ ಕಾರ್ಯ ಕ್ರಮಕ್ಕಾಗಿ ಕಾಡಿನಲ್ಲಿ ಚಿತ್ರೀಕರಣ ನಡೆಯಿತು.

ಕಲ್ಕೆರೆ ಪ್ರದೇಶದಲ್ಲಿ ಚಿತ್ರೀ ಕರಣ: ಜ. 29ರಂದು ಮೈಸೂರಿನಿಂದ ಬಂಡೀಪುರಕ್ಕೆ ಆಗಮಿಸಿದ ನಟ ಅಕ್ಷಯ್ಕುಮಾರ್, ಇಲ್ಲಿನ ಸೆರಾಯ್ ರೆಸಾರ್ಟ್​ನಲ್ಲಿ ಉಳಿದುಕೊಂಡಿದ್ದರು. ಗುರುವಾರ ಕಲ್ಕೆರೆ ಅರಣ್ಯ ಪ್ರದೇಶದ ಸುತ್ತಲಿನ ಐನೋರ ಮಾರಿಗುಡಿ ಹಾಗೂ ರಾಂಪುರದಲ್ಲಿರುವ ಅರಣ್ಯ ಇಲಾಖೆಯ ಸಾಕಾನೆ ಶಿಬಿರದ ಸಮೀಪದಲ್ಲಿ ಶೂಟಿಂಗ್ ನಡೆಸಿದರು.

ಸಂಜೆ 4 ಗಂಟೆಯೊಳಗೆ ಅರಣ್ಯ ಪ್ರದೇಶದಿಂದ ಹೊರತೆರಳಬೇಕಾಗಿದ್ದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಗೆ ಶೂಟಿಂಗ್ ಮುಗಿಸಿ ಹೊರಬಂದರು. ಚಿತ್ರೀಕರಣ ಮುಗಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಜತೆ ಅಕ್ಷಯ್ ಮತ್ತು ಗ್ರಿಲ್ಸ್ ಸ್ವಲ್ಪ ಹೊತ್ತು ಕಾಲ ಕಳೆದರು. ಸ್ಥಳದಲ್ಲಿದ್ದ ಪೊಲೀಸರೊಂದಿಗೆ ಸೆಲ್ಪಿ ತೆಗೆಸಿಕೊಂಡರು. ನಂತರ ಪಟ್ಟಣದ ಹೆಲಿಪ್ಯಾಡ್​ನಿಂದ ಹೆಲಿಕಾಪ್ಟರ್​ನಲ್ಲಿ ಮೈಸೂರಿನ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net