ಅಕ್ಷಯ್ ಬಾಕ್ಸಾಫೀಸ್ ಸುಲ್ತಾನ್

akshay jan 10 2020
Published on

ಬಾಲಿವುಡ್ ನಟ ಅಕ್ಷಯ್ಕುಮಾರ್ ಸದ್ಯ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಮುಟ್ಟಿದ್ದೆಲ್ಲ ಚಿನ್ನ ಅನ್ನುವ ಹಾಗೆ 2019ರಲ್ಲಿ ಅಕ್ಷಯ್ಕುಮಾರ್ ಅಭಿನಯಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಫಸಲನ್ನೇ ತೆಗೆದಿವೆ. ಕಳೆದ ವರ್ಷ ತೆರೆಕಂಡ ಅಕ್ಷಯ್ ನಟನೆಯ ಚಿತ್ರಗಳು ಬರೋಬ್ಬರಿ ನಾಲ್ಕು. ‘ಕೇಸರಿ’, ‘ಮಿಷನ್ ಮಂಗಲ್’, ‘ಹೌಸ್​ಫುಲ್ 4’, ‘ಗುಡ್ ನ್ಯೂಸ್’ ಚಿತ್ರಗಳು ಬಿಡುಗಡೆ ಆಗಿ ಕೋಟಿ ಕೋಟಿ ರೂ. ಕಲೆಕ್ಷನ್ ಮಾಡಿವೆ. ಅಲ್ಲದೆ, ಒಂದೇ ವರ್ಷ ನಾಲ್ಕು ಸಿನಿಮಾಗಳಿಂದ ಸಕ್ಸಸ್ ಕಂಡಿದ್ದ ನಟರಾದ ರಾಜೇಶ್ ಖನ್ನಾ, ಧಮೇಂದ್ರ ಹಾಗೂ ಅಮಿತಾಭ್ ಬಚ್ಚನ್ ಸಾಲಿಗೆ ಅಕ್ಷಯ್ ಹೊಸ ಸೇರ್ಪಡೆ.

ಈ ನಾಲ್ಕು ಚಿತ್ರಗಳು ವಿಶ್ವದಾದ್ಯಂತ 1,000 ಕೋಟಿ ರೂ.ಗೂ ಮೀರಿ ಗಳಿಕೆ ಮಾಡಿ ಹೊಸ ದಾಖಲೆ ಸೃಷ್ಟಿಸುವ ಸನಿಹದಲ್ಲಿವೆ. ಬಾಲಿವುಡ್​ನಲ್ಲಿ ಈ ದಾಖಲೆ ಬರೆದ ಮೊದಲ ನಟ ಎಂಬ ಹೆಗ್ಗಳಿಕೆಗೆ ಅಕ್ಷಯ್ ಸಾಕ್ಷಿಯಾಗಲಿದ್ದಾರೆ. ‘ಕೇಸರಿ’ 151.87 ಕೋಟಿ ರೂ., ‘ಮಿಷನ್ ಮಂಗಲ್’ 192.67 ಕೋಟಿ ರೂ., ‘ಹೌಸ್​ಫುಲ್ 4’ 205.60 ಕೋಟಿ ರೂ. ಗಳಿಸಿವೆ. ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ ‘ಗುಡ್ ನ್ಯೂಸ್’ 200 ಕೋಟಿ ರೂ. ಗಳಿಸಿ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಈ ನಾಲ್ಕು ಚಿತ್ರಗಳು ಒಟ್ಟು 750.14 ಕೋಟಿ ಕಲೆಕ್ಷನ್ ಮಾಡಿದ್ದು ಭಾರತದಲ್ಲಿ ಮಾತ್ರ. ಇನ್ನು ವಿಶ್ವಮಟ್ಟದಲ್ಲಿ ‘ಕೇಸರಿ’ 203 ಕೋಟಿ ರೂ., ಮಿಷನ್ ಮಂಗಲ್’ 277 ಕೋಟಿ ರೂ., ‘ಹೌಸ್​ಫುಲ್-4’ 293 ಕೋಟಿ ರೂ., ಗುಡ್ ನ್ಯೂಸ್’ 305 ಕೋಟಿ ರೂ. ವಸೂಲಿ ಮಾಡಿದ್ದು, ಒಟ್ಟು 1078 ಕೋಟಿ ರೂ. ಗಳಿಸಿವೆ ಎನ್ನಲಾಗುತ್ತಿದೆ. -ಏಜೆನ್ಸೀಸ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net