ಭಕ್ತಿಪ್ರಧಾನ ‘ಜಗನ್ಮಾತೆ ಅಕ್ಕಮಹಾದೇವಿ’: ಮೊದಲ ಹಂತದ ಹಾಡುಗಳ ಚಿತ್ರೀಕರಣ ಮುಗಿಸಿದ ಚಿತ್ರತಂಡ

akkamadevi
Published on

ಬೆಂಗಳೂರು: 12ನೇ ಶತಮಾನದ ವಚನ ಸಾಹಿತ್ಯ ಚಳವಳಿಯಲ್ಲಿ ವಚನಗಾರ್ತಿ ಅಕ್ಕಮಹಾದೇವಿ ಪಾತ್ರ ಮಹತ್ವವಾದುದು. ಇವರ ಜೀವನ, ಸಂದೇಶ, ವಿಚಾರಗಳನ್ನು ಆಧರಿಸಿ ಕನ್ನಡದಲ್ಲಿ ಈ ಹಿಂದೆ ಹಲವು ಚಿತ್ರಗಳು ಮೂಡಿಬಂದಿವೆ. ಇದೀಗ ಇದಕ್ಕೆ ಹೊಸ ಸೇರ್ಪಡೆ ‘ಶ್ರೀ ಜಗನ್ಮಾತೆ ಅಕ್ಕಮಹಾದೇವಿ’. ಸುಮಾರು 900 ವರ್ಷಗಳ ಹಿಂದೆ ನಡೆದ ಅಕ್ಕಮಹಾದೇವಿಯ ಕಥೆಯನ್ನು ಇಲ್ಲಿ ಹೇಳಲಾಗುತ್ತಿದೆ. ವಿಷ್ಣುಕಾಂತ್ ನಿರ್ದೇಶನದ ಜತೆಗೆ ನಿರ್ಮಾಣಕ್ಕೆ ಮುಂದಾಗಿದ್ದು, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಸುರಕ್ಷಾ ಮುಖ್ಯಭೂಮಿಕೆಯಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ ಗುಲ್ಬರ್ಗಾ, ಬೀದರ್, ಶ್ರೀಶೈಲ ಹಾಗೂ ಕಾಡುಗುಡ್ಡದ ಜಲಪಾತದ ಸುತ್ತಮುತ್ತ ಹಾಡುಗಳ ಚಿತ್ರೀಕರಣ ನಡೆಸಿದೆ. ಬಾಕಿ ವಚನಗಳ ದೃಶ್ಯಗಳ ಚಿತ್ರೀಕರಣ ಇನ್ನಷ್ಟೇ ಆರಂಭಿಸಬೇಕಿದೆ. ಬಸವಣ್ಣ ಹಾಗೂ ಅಕ್ಕಮಹಾದೇವಿ ರಚಿಸಿರುವ 21 ವಚನಗಳನ್ನು ಬಳಸಿಕೊಂಡು ವಿಷ್ಣುಕಾಂತ್ ಮೂರು ಹಾಡುಗಳನ್ನು ರಚಿಸಿರುವುದು ವಿಶೇಷ. ವಿಷ್ಣುಕಾಂತ್, ಸುರಕ್ಷಾ ಜತೆ ಭವ್ಯಾ, ಶ್ವೇತಾ, ಬಿರಾದಾರ್, ಡಾ. ಹೆಲನ್, ಪಲ್ಲಕ್ಕಿ ರಾಧಾಕೃಷ್ಣ, ತಬಲಾ ನಾಣಿ, ಸುಚೇಂದ್ರ ಪ್ರಸಾದ್, ಎಂ.ಪಾಟೀಲ್ ಕಲಾ ಬಳಗದಲ್ಲಿದ್ದಾರೆ. ಆರ್.ಪಳನಿ ಸೇನಾಪತಿ ಸಂಗೀತ, ರವಿ ಸುವರ್ಣ ಛಾಯಾಗ್ರಹಣ, ಮದನ್ ಹರಿಣಿ ನೃತ್ಯ ಹಾಗೂ ಅಮಿತ್ ಜವಳಕರ ಸಂಕಲನ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net