ಕಂಬನಿಯಾದ ರಿಯಲ್​ ಮುದ್ದುಗಳು; "ಲವ್​ ಯು ಮುದ್ದು' ವೀಕ್ಷಿಸಿದ ಆಕಾಶ್​ ಮತ್ತು ಅಂಜಲಿ ದಂಪತಿ

ccsascasc
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

"ಕೆಮಿಸ್ಟ್ರಿ ಆಫ್​ ಕರಿಯಪ್ಪ', "ಕ್ರಿಟಿಕಲ್​ ಕೀರ್ತನೆಗಳು' ನಿರ್ದೇಶಕ ಕುಮಾರ್​ ಆ್ಯಕ್ಷನ್​-ಕಟ್​ ಹೇಳಿರುವ ಸಿನಿಮಾ "ಲವ್​ ಯು ಮುದ್ದು'. ಮಹಾರಾಷ್ಟ್ರದ ಸೋಲಾಪುರದ ಜೋಡಿ ಆಕಾಶ್​ ನಾರಾಯಣ್ಕರ್​ ಮತ್ತು ಅಂಜಲಿ ಬಾಯಿ ಶಿಂಧೆ ಜೀವನದಲ್ಲಿ ನಡೆದ ನೈಜ ಘಟನೆಯಿಂದ ಸ್ಪೂರ್ತಿ ಪಡೆದಿರುವ ಚಿತ್ರವಿದು. ಸಿದ್ದು ಮೂಲಿಮನಿ ಮತ್ತು ರೇಷ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ರಾಜೇಶ್​ ನಟರಂಗ, ಗಿರೀಶ್​ ಶಿವಣ್ಣ, ತಬಲ ನಾಣಿ, ಶ್ರೀವತ್ಸ, ಸ್ವಾತಿ ತಾರಾಗಣದಲ್ಲಿದ್ದಾರೆ. ಈಗಾಗಲೇ ಟ್ರೇಲರ್​ ಮತ್ತು ಎರಡು ಹಾಡುಗಳು ಬಿಡುಗಡೆಯಾಗಿದ್ದು, ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಸೆಳೆದಿದೆ.

ಇಂದು ರಾಜ್ಯಾದ್ಯಂತ ಸಿನಿಮಾ ತೆರೆಗೆ ಬರುತ್ತಿದ್ದು, ಅದಕ್ಕೂ ಮುನ್ನ ನಿರ್ದೇಶಕ ಕುಮಾರ್​ ಆಕಾಶ್​ ಮತ್ತು ಅಂಜಲಿ ಇಬ್ಬರನ್ನೂ ಪ್ರೀಮಿಯರ್​ಗೆ ಆಮಂತ್ರಿಸಿದ್ದರು. ಸಿನಿಮಾ ನೋಡಿದ ಬಳಿಕ ಕಣ್ಣೀರು ಹಾಕುತ್ತಾ ವೇದಿಕೆಗೆ ಬಂದ ಜೋಡಿ, ಪ್ರೇಕ್ಷಕರಿಗೆ ನಮಸ್ಕರಿಸಿದರು. "ನಮ್ಮ ಜೀವನದಲ್ಲಿ ನಡೆದ ಟನೆಯನ್ನು ಸಿನಿಮಾ ಮಾಡುತ್ತಾರೆ ಅಂತ ನಾನು ಯಾವತ್ತೂ ಅಂದುಕೊಂಡಿರಲಿಲ್ಲ. ನಾವು ಎದುರಿಸಿದ ಕಷ್ಟಗಳು ಬೇರೆ ಯಾರಿಗೂ ಬಾರದಿರಲಿ. ಪತಿಗೆ ಪತ್ನಿಯೇ ದೇವತೆ, ಪತ್ನಿಗೆ ಪತಿಯೇ ದೇವರು ಅಂತ ನಂಬಬೇಕು. ಎಲ್ಲರೂ ಖುಷಿ ಖುಷಿಯಾಗಿರಿ. ಪ್ರೀತಿಸುವವರನ್ನು ಬದುಕಿರುವಾಗಲೂ ಪ್ರೀತಿಸಿ, ಸತ್ತ ಬಳಿಕವೂ ಪ್ರೀತಿಸಿ' ಎಂದು ಭಾವುಕರಾಗಿಯೇ ನುಡಿದರು.

ಭಾವನಾತ್ಮಕ ಪಯಣ

"ಲವ್​ ಯು ಮುದ್ದು' ಒಂದು ರೊಮ್ಯಾಂಟಿಕ್​ ಡ್ರಾಮಾ. ಪ್ರೀತಿಯೇ ಸರ್ವಸ್ವ, ಪ್ರೀತಿಯೇ ಸಕಲ ಅಂತ ನಂಬಿದ ಆಕಾಶ್​ ಮತ್ತು ಅಂಜಲಿ ಜೀವನದಲ್ಲಿ ನಡೆದ ಏಳು&ಬೀಳಿನ ಕಥೆ. ಮದುವೆಯಾದ ಬಳಿಕ ಈ ಜೋಡಿ ದೇವಸ್ಥಾನಕ್ಕೆ ತೆರಳುವಾಗ ನಡೆದ ಟನೆಯೊಂದು ಅವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತದೆ. ಇವರು ಆ ಸಂದರ್ಭವನ್ನು ಹೇಗೆ ಎದುರಿಸುತ್ತಾರೆ? ಅದರಿಂದ ಹೇಗೆ ಹೊರಬರುತ್ತಾರೆ? ಎಂಬುದೇ "ಲವ್​ ಯು ಮುದ್ದು'.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net