ನನಗಿದು ಉಳಿವಿನ ಪ್ರಶ್ನೆ!; ಸೋಲಿನ ಬಗ್ಗೆ ಅಜೇಯ್ ರಾವ್ ಮಾತು

ajay rao
Published on

ಬೆಂಗಳೂರು: ‘ಎಕ್ಸ್‌ಕ್ಯೂಸ್ ಮೀ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪದಾರ್ಪಣೆ ಮಾಡಿದ ನಟ ಅಜೇಯ್ ರಾವ್. ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿರುವ ಅಜೇಯ್ ಈವರೆಗೆ 29 ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದಾರೆ.

‘ಕೃಷ್ಣಲೀಲಾ’ ಚಿತ್ರವನ್ನು ನಿರ್ಮಿಸಿದ್ದಾರೆ. ಆದರೆ, ಅವುಗಳಲ್ಲಿ ಅತ್ಯದ್ಭುತ ಯಶಸ್ಸು ಕಂಡಿದ್ದು ಎಂದರೆ ‘ಕೃಷ್ಣನ್ ಲವ್‌ಸ್ಟೋರಿ’, ‘ತಾಜ್ ಮಹಲ್’ ಸೇರಿ ಕೆಲವು ಸಿನಿಮಾಗಳು. ಈ ಬಗ್ಗೆ ಅಜೇಯ್ ಬೇಸರ ವ್ಯಕ್ತಪಡಿಸಿದ್ದಾರೆ.

‘ನನ್ನ ಸಾಕಷ್ಟು ಸಿನಿಮಾಗಳು ಸೋತಿವೆ. ಆದರೆ, ಆ ಸೋಲು ನನ್ನ ನಟನೆಯ ಕಾರಣಕ್ಕೆ ಎಂದಾಗಿದ್ದರೆ ಬೇಜಾರಾಗುತ್ತಿರಲಿಲ್ಲ. ನನ್ನ ಪ್ರಾಮಾಣಿಕ ಪ್ರಯತ್ನದ ನಂತರವೂ ಚಿತ್ರ ಸೋತಿದ್ದು ಬೇಸರದ ವಿಷಯ. ಹಲವರ ಪ್ರಯತ್ನದ ಬಳಿಕವೂ ನನ್ನ ಕ್ಯಾಲಿಬರ್‌ಗೆ ಸೂಕ್ತ ಅವಕಾಶ ಸಿಕ್ಕಿಲ್ಲ. ಆದರೆ, ಈಗ ನಾನು ಚಿತ್ರರಂಗದಲ್ಲಿ ಉಳಿಯಲೇಬೇಕಾದ ಅನಿವಾರ್ಯತೆ ಇದೆ. ಎರಡು ಪೀಳಿಗೆಯ ನಡುವೆ ಇದ್ದೇನೆ, ಹೀಗಾಗಿ ನಾನು ಸಿಕ್ಕ ಚಿತ್ರಗಳನ್ನೆಲ್ಲ ಮಾಡಲು ಸಾಧ್ಯವಿಲ್ಲ. ಎಚ್ಚರದಿಂದ ಸಿನಿಮಾ ಆರಿಸಿಕೊಂಡು ಉತ್ತಮ ಚಿತ್ರ ಮಾಡಲೇಬೇಕು. ನನ್ನ ಮುಂದಿನ ಸಿನಿಮಾ ಆ ಕೆಲಸ ಮಾಡುತ್ತದೆ ಎಂಬ ಭರವಸೆಯಿದೆ’ ಎಂದು ಹೇಳಿಕೊಳ್ಳುತ್ತಾರೆ.

ಅಜೇಯ್ ರಾವ್ ಸದ್ಯ ಅವರೇ ನಿರ್ದೇಶಿಸಿ, ನಿರ್ಮಿಸಿ, ಅಭಿನಯಿಸುತ್ತಿರುವ ‘ಯುದ್ಧಕಾಂಡ’ ಚಿತ್ರದಲ್ಲಿ ಬಿಜಿಯಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net