ಲಾಕ್​ಡೌನ್​ ನಡುವೆಯೂ ಒಂದಷ್ಟು ಕೆಲಸ ಮುಗಿಸಿಕೊಂಡ ಅಜಯ್​ರಾವ್​ ‘ಶೋಕಿವಾಲ’

Shokiwala
Published on

ಬೆಂಗಳೂರು: ಕೃಷ್ಣ ಅಜಯ್ ರಾವ್ ನಾಯಕತ್ವದ ‘ಶೋಕಿವಾಲ’ ಚಿತ್ರದ ಚಿತ್ರೀಕರಣ ಪೂರ್ಣವಾದ ಬೆನ್ನಲ್ಲೇ ಡಬ್ಬಿಂಗ್ ಸಹ ಮುಕ್ತಾಯವಾಗಿದೆ. ಡಬ್ಬಿಂಗ್ ಸಮಯದಲ್ಲಿ ಚಿತ್ರವನ್ನು ವೀಕ್ಷಿಸಿದ ಚಿತ್ರದ ಕಲಾವಿದರು ‘ಚಿತ್ರ ಉತ್ತಮವಾಗಿ ಮೂಡಿಬಂದಿದೆ' ಎಂದು ತಿಳಿಸಿದ್ದಾರೆ, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಲಾಂಛನದಲ್ಲಿ ಟಿ.ಆರ್.ಚಂದ್ರಶೇಖರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜಾಕಿ ತಿಮ್ಮೇಗೌಡ ಧನ್ಯವಾದ ತಿಳಿಸಿದ್ದಾರೆ. ಸದ್ಯ ಚಿತ್ರದ ಪೋಸ್ಟ್‌ ಪ್ರೊಡಕ್ಷನ್ ನಡೆಯುತ್ತಿದೆ.
ಶೋಕಿವಾಲ ಪಕ್ಕಾ ಹಳ್ಳಿ ಸೊಗಡಿನ ಚಿತ್ರ. ಅಜಯ್ ರಾವ್ ಗೆ ನಾಯಕಿಯಾಗಿ ಸಂಜನಾ ಆನಂದ್ ನಟಿಸಿದ್ದಾರೆ. ಶರತ್ ಲೋಹಿತಾಶ್ವ , ಗಿರೀಶ್ ಶಿವಣ್ಣ , ತಬಲಾ ನಾಣಿ , ಮುನಿರಾಜ್, ಪ್ರಮೋದ್ ಶೆಟ್ಟಿ, ಅರುಣಾ ಬಾಲರಾಜ್, ವಾಣಿ, ಚಂದನ, ಲಾಸ್ಯಾ, ನಾಗರಾಜಮೂರ್ತಿ ಸೇರಿ ಹತ್ತಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಮೊದಲ ಬಾರಿ ಅಜಯ್ ರಾವ್ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಸಂಜನಾ ಆನಂದ್ ಅವರಿಗೂ ಹಳ್ಳಿ ಹುಡುಗಿಯಾಗಿ ಮೊದಲ ಪಾತ್ರ. 45 ದಿನದಲ್ಲಿ ಸಿನಿಮಾ ಶೂಟಿಂಗ್​ ಮುಗಿದಿದ್ದು, ಅಂದುಕೊಂಡಂತೆ ನಡೆದುಕೊಂಡಿದ್ದಾರೆ ನಿರ್ದೇಶಕರು. ಚನ್ನಪಟ್ಟಣ, ಹೊಂಗನೂರು, ವಿರೂಪಾಕ್ಷಪುರ, ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ಮಾಗಡಿ, ತುಮಕೂರಿನಲ್ಲಿ ಚಿತ್ರದ ಶೂಟಿಂಗ್​ ಮಾಡಲಾಗಿದೆ. ಶ್ರೀಧರ್. ವಿ. ಸಂಭ್ರಮ್ ಸಂಗೀತ ನೀಡಿದ್ದು, 4 ಹಾಡುಗಳನ್ನು ಕಂಪೋಸ್​ ಮಾಡಿದ್ದಾರೆ. ಲಾಕ್ಡೌನ್​​ ಮುಗಿದ ಬಳಿಕ ಹಾಡುಗಳು ಬಿಡುಗಡೆ ಆಗಲಿವೆಯಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net