ಕೇವಲ ಆರೇ ದಿನದಲ್ಲಿ ಬಾಕ್ಸ್ ಆಫೀಸ್​ ಕೊಳ್ಳೆ ಹೊಡೆದ 'ತಾನಾಜಿ'!: ನೂರು ಕೋಟಿ ಕ್ಲಬ್ ಸೇರಿದ ಅಜಯ್ ದೇವಗನ್ ಸಿನಿಮಾ

Thanaji Ajay Devagan 16 JAN 20
Published on

ಮುಂಬೈ: ಕೇವಲ ಆರೇ ಆರು ದಿನದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ "ತಾನಾಜಿ", 100 ಕೋಟಿ ರೂಪಾಯಿ ಗಳಿಕೆಯ ಸಿನಿಮಾಗಳ ಕ್ಲಬ್ ಸೇರಿದೆ.

ಓಂ ರಾವತ್ ನಿರ್ದೇಶನ, ಅಜಯ್ ದೇವಗನ್ ನಟನೆಯ ಈ ಸಿನಿಮಾ ಜನವರಿ 10ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. "ತಾನಾಜಿ" ಅಜಯ್ ದೇವಗನ್ ಅವರ ನಟನೆಯ ನೂರನೇ ಸಿನಿಮಾವೂ ಹೌದು. ಕೇವಲ ಆರು ದಿನಗಳಲ್ಲಿ ಸಿನಿಮಾ ಗಳಿಕೆ 107.68 ಕೋಟಿ ರೂಪಾಯಿ ಎಂಬ ವಿಚಾರವನ್ನು ದೇವಗನ್ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಸೇನಾಧಿಪತಿ ತಾನಾಜಿ ಮಾಲ್ಸುರೆಯ ಜೀವನಕಥೆಯನ್ನು ಆಧರಿಸಿದ ಸಿನಿಮಾ ಇದು. ಮೊಘಲರ ವಶದಲ್ಲಿದ್ದ ಕೊಂಡಾನಾ ಕೋಟೆಯನ್ನು ಮರುವಶಪಡಿಸಿಕೊಳ್ಳುವಲ್ಲಿ ತಾನಾಜಿ ವಹಿಸಿದ ಪಾತ್ರ ಮಹತ್ವದ್ದು. ಈ ಕಥೆಯನ್ನಾಧರಿಸಿದ ಸಿನಿಮಾದಲ್ಲಿ ಉದಯಭಾನು ಸಿಂಗ್ ರಾಥೋಡ್​ ಪಾತ್ರವನ್ನುಸೈಫ್ ಅಲಿ ಖಾನ್​, ಸಾವಿತ್ರಿ ಬಾಯಿ ಮಾಲ್ಸುರೆ ಪಾತ್ರವನ್ನು ಕಾಜೋಲ್ ಮಾಡಿದರೆ, ಛತ್ರಪತಿ ಶಿವಾಜಿ ಮಹಾರಾಜರ ಪಾತ್ರವನ್ನು ಶರದ್ ಕೇಲ್ಕರ್ ನಿರ್ವಹಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net