'ಪುಷ್ಪ 2' VS 'ಸಿಂಗಂ ಅಗೈನ್'​; ಒಂದೇ ದಿನ ರಿಲೀಸ್​ ಆಗಲಿದೆ ಇಬ್ಬರು ಸ್ಟಾರ್​ ನಟರ ಸಿನಿಮಾ!

Untitled design - 2023-09-12T133218.204
Published on

ಆಂಧ್ರಪ್ರದೇಶ: ಟಾಲಿವುಡ್​ನ ಸ್ಟೈಲಿಶ್​ ಸ್ಟಾರ್​, ನಟ ಅಲ್ಲು ಅರ್ಜುನ್​ ನಟನೆಯ 'ಪುಷ್ಪ 2: ದಿ ರೂಲ್' ಚಿತ್ರದ ರಿಲೀಸ್​ ದಿನಾಂಕವನ್ನು ಇತ್ತೀಚೆಗಷ್ಟೇ ಚಿತ್ರತಂಡ ಅಧಿಕೃತವಾಗಿ ಘೋಷಿಸಿತು. ಇದರ ಬೆನ್ನಲ್ಲೇ ಇದೀಗ ಬಾಲಿವುಡ್​ ನಟ ಅಜಯ್​ ದೇವಗನ್​ ಅಭಿನಯದ 'ಸಿಂಗಮ್ ಅಗೈನ್'​ ಚಿತ್ರವೂ ಸಹ ಐಕಾನ್​ ಸ್ಟಾರ್​ ಚಿತ್ರದ ರಿಲೀಸ್​ ದಿನದಂದೇ ಬಿಡುಗಡೆಗೊಳ್ಳಲು ಸಜ್ಜಾಗಿದ್ದು, ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿ ಕೊಡಲು ಸಿದ್ಧವಾಗಿದೆ.

ಅಲ್ಲು ಅರ್ಜುನ್ ಅಭಿನಯದ ತೆಲುಗು ಭಾಷೆಯ ಆಕ್ಷನ್-ಡ್ರಾಮಾ ಜಾನರ್​, 2021 ರಲ್ಲಿ ಬಿಡುಗಡೆಯಾದ 'ಪುಷ್ಪ: ದಿ ರೈಸ್' ಚಿತ್ರದ ಮುಂದುವರಿದ ಭಾಗವಾದ 'ಪುಷ್ಪ 2: ದಿ ರೂಲ್' ಸಿನಿಮಾ ಆಗಸ್ಟ್​ 15, 2024 ರಂದು ಜಾಗತಿಕವಾಗಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಈ ಬಗ್ಗೆ ಇತ್ತೀಚೆಗಷ್ಟೇ ಚಿತ್ರತಂಡ ಪೋಸ್ಟರ್​ ಜತೆಗೆ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸಿತು.

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 'ಪುಷ್ಪ 1'ರ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡ ಅಲ್ಲು ಅರ್ಜುನ್, ತಮ್ಮ ಅಭಿಮಾನಿಗಳು ಮತ್ತು ಚಿತ್ರರಸಿಕರಲ್ಲಿ ಭಾರೀ ಸಂತಸ ಮೂಡಿಸಿದರು. ದೇಶದೆಲ್ಲೆಡೆ ಇದೀಗ 'ಪುಷ್ಪ 2' ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಮತ್ತು ಕುತೂಹಲ ವ್ಯಕ್ತವಾಗಿದ್ದು, ಸದ್ಯ ಸಿನಿಮಾದ ಬಿಡುಗಡೆಯತ್ತ ಫ್ಯಾನ್ಸ್​ಗಳ ಕಾತರ ಹೆಚ್ಚಿದೆ.

ಈ ಮಧ್ಯೆ ಅಲ್ಲು ಅರ್ಜುನ್ ನಟನೆಯ​ ಸಿನಿಮಾ 2024ರ ಸ್ವಾತಂತ್ರ್ಯೋತ್ಸವ ದಿನದಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಅಜಯ್​ ದೇವಗನ್​ ಅವರ 'ಸಿಂಗಂ ಅಗೈನ್'​ ಕೂಡ ಅದೇ ದಿನದಂದು ರಿಲೀಸ್​ ಆಗಲಿದೆ ಎಂಬುದು ಸದ್ಯ ಪ್ರೇಕ್ಷಕರ ಗೊಂದಲಕ್ಕೆ ಕಾರಣವಾಗಿದೆ. ಇಬ್ಬರು ಸ್ಟಾರ್​ ನಟರ ಸಿನಿಮಾ ಒಂದೇ ದಿನ ಬಿಡುಗಡೆಗೊಳ್ಳುವ ಮುಖೇನ ಬಾಕ್ಸ್ ಆಫೀಸ್​ನಲ್ಲಿ ಭಾರೀ ಘರ್ಷಣೆಗೆ ಕಾರಣವಾಗಲಿದೆ.

ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ತೆರೆಗೆ ಬರಲಿರುವ 'ಸಿಂಗಮ್ ಅಗೈನ್' ಚಿತ್ರದಲ್ಲಿ ಅಜಯ್​ ದೇವಗನ್​ ವಿಶೇಷ ಪಾತ್ರದಲ್ಲಿ ಸಿನಿಪ್ರೇಕ್ಷಕರ ಎದುರು ಹಾಜರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರು ಸ್ಟಾರ್​ ನಟರ ಸಿನಿಮಾಗಳ ರಿಲೀಸ್​ ದಿನಾಂಕದಲ್ಲಿ ಏನಾದರೂ ಬದಲಾವಣೆ ಕಾಣಬಹುದೇ ಎಂಬ ಪ್ರಶ್ನೆಗಳು ಸದ್ಯ ಸಿನಿಪ್ರೇಕ್ಷಕರಲ್ಲಿ ಕಾಡಲಾರಂಭಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net