ಪುತ್ರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಸುಂದರವಾದ ಫೋಟೋ ಪ್ರಕಟಿಸಿ ಶುಭಕೋರಿದ ಅಜಯ್​ ದೇವಗನ್​

nyasa
Published on

ನವದೆಹಲಿ: ಬಾಲಿವುಡ್​ನ ಸೂಪರ್​ಸ್ಟಾರ್​ ಅಜಯ್​ ದೇವಗನ್​ ಸೋಮವಾರ ಭಾರಿ ಸಂತಸದಲ್ಲಿದ್ದರು. ಇಂದು ಅವರ ಹಿರಿಯ ಪುತ್ರಿ ನ್ಯಾಸಾ ಅವರ 17ನೇ ಹುಟ್ಟುಹಬ್ಬ ಇದಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಪುತ್ರಿಯೊಂದಿಗೆ ತಾವೇ ತೆಗೆದುಕೊಂಡಿರುವ ಸೆಲ್ಫಿ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಅಜಯ್​ ದೇವಗನ್​, ಪುತ್ರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅಲ್ಲದೆ, ಲಾಕ್​ಡೌನ್​ ಅವಧಿಯಲ್ಲಿ ಮನೆಯಲ್ಲೇ ಇದ್ದು, ಸುರಕ್ಷಿತವಾಗಿರು ಎಂದು ಹಾರೈಸಿದ್ದಾರೆ.

ಅಜಯ್​ ದೇವಗನ್​ ಮತ್ತು ಕಾಜೋಲ್​ ಪುತ್ರಿ ನ್ಯಾಸಾ ಸಿಂಗಾಪುರದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಲಾಕ್​ಡೌನ್​ ಘೋಷಣೆಯಾಗಿ, ವಿಮಾನ, ರೈಲು ಮತ್ತು ಬಸ್​ ಸಂಚಾರ ರದ್ದುಗೊಳ್ಳುವ ಮುನ್ನವೇ ನ್ಯಾಸಾ ಮುಂಬೈಗೆ ಮರಳಿದ್ದರು.

ವಿದೇಶದಿಂದ ಬಂದ ಹಿನ್ನೆಲೆಯಲ್ಲಿ ನ್ಯಾಸಾ ಕರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಇವರಿಂದಾಗಿ ಇವರ ಅಮ್ಮ ಕಾಜೋಲ್​ ಅವರಿಗೂ ಸೋಂಕು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿಗಳು ಹರಿದಾಡಲಾರಂಭಿಸಿದ್ದವು. ಕಾಜೋಲ್​ ಮತ್ತು ನ್ಯಾಸಾ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ಸೋಂಕಿಗೆ ತುತ್ತಾಗಿಲ್ಲ. ಅವೆಲ್ಲವೂ ಆಧಾರರಹಿತ ಮತ್ತು ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟನೆ ನೀಡುವ ಮೂಲಕ ಅಜಯ್​ ದೇವಗನ್​ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net