

ಚೆನ್ನೈ: ಐಶ್ವರ್ಯ ರಾಜೇಶ್ ತಮಿಳು ಹಾಗೂ ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟಿ. ಕಳೆದ ಫೆಬ್ರವರಿಯಲ್ಲಿ ತೆರೆಕಂಡ ವಿಜಯ್ ದೇವರಕೊಂಡ ನಟನೆಯ "ವರ್ಲ್ಡ್ ಫೇಮಸ್ ಲವರ್" ಚಿತ್ರದ ನಟನೆಗೆ ಭಾರಿ ಮೆಚ್ಚುಗೆ ಗಳಿಸಿರುವ ಐಶ್ವರ್ಯಾ, ಇತ್ತೀಚೆಗಷ್ಟೇ ನಿಮಗೋಸ್ಕರ ಸಾಯುಲು ಸಿದ್ಧನಿದ್ದೇನೆ ಎಂದ ಅಭಿಮಾನಿಗೆ ಅವರು ನೀಡಿದ ಪ್ರತಿಕ್ರಿಯೆಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.
ಜೂನ್ 11ರಂದು ಐಶ್ವರ್ಯ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿಕೊಂಡಿದ್ದಾರೆ. ಫೋಟೋ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ. ಇದರ ನಡುವೆ ತಮಿಳುನಾಡಿನ ತ್ರಿಪುರ ಮೂಲದ ಕಟ್ಟಾ ಅಭಿಮಾನಿಯೊಬ್ಬನ ಕಾಮೆಂಟ್ಗೆ ಐಶ್ವರ್ಯ ನೀಡಿರುವ ಉತ್ತರಕ್ಕೆ ಬಹುಪರಾಕ್ ದೊರಕಿದೆ. ಇದನ್ನೂ ಓದಿ: ಪತ್ನಿ ಗರ್ಭಿಣಿ ಎಂದು ತಿಳಿದಾಗ ಚಿರು ಕೊಟ್ಟ ಉಡುಗೊರೆ ನೋಡಿ ಭಾವುಕರಾಗಿದ್ರು ಮೇಘನಾ: ಮಗು ವಿಚಾರದಲ್ಲೂ ಚಿರು ಆಸೆ ಹೀಗಿತ್ತು
ಐಶ್ವರ್ಯಾರ ಈ ಉತ್ತರ ನೆಟ್ಟಿಗರ ಮನಗೆದ್ದಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿವೆ. ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಐಶ್ವರ್ಯಾ ವಿಜಯ್ ಸೇತುಪತಿ ಅಭಿನಯದ ಪೆ ರಣಸಿಂಗಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಲಾಕ್ಡೌನ್ನಂತರ ಚಿತ್ರ ಬಿಡುಗಡೆಯಾಗಲಿದೆ. (ಏಜೆನ್ಸೀಸ್)