ಇನ್​ಸ್ಟಾಗ್ರಾಂನಲ್ಲಿ 95 ಲಕ್ಷ ಹಿಂಬಾಲಕರಿರುವ ಐಶ್ವರ್ಯಾ ಫಾಲೋ ಮಾಡೋದು ಒಬ್ಬರನ್ನು ಮಾತ್ರ! ಯಾರು ಆ ಲಕ್ಕಿ ಮ್ಯಾನ್?

aishwarya
Published on

ಮುಂಬೈ: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಕಂಡರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಸಿನಿಮಾಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಮಿಂಚುವ ಬಚ್ಚನ್ ಕುಟುಂಬದ ಸೊಸೆಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ ಎಂದರೆ ತಪ್ಪಾಗಲಾರದು. ಸೋಶಿಯಲ್ ಮೀಡಿಯಾಗಳಲ್ಲಿ ಅಷ್ಟೊಂದು ಆ್ಯಕ್ಟಿವ್ ಇಲ್ಲವಾದರೂ ಅವರಿಗೆ ಇನ್​ಸ್ಟಾಗ್ರಾಂನಲ್ಲಿ 95 ಲಕ್ಷ ಹಿಂಬಾಲಕರಿದ್ದಾರೆ. ಆದರೆ ಅವರು ಹಿಂಬಾಲಿಸುತ್ತಿರುವುದು ಒಬ್ಬರನ್ನು ಮಾತ್ರ.

ಐಶ್ವರ್ಯಾ ಇನ್​ಸ್ಟಾಗ್ರಾಂಗೆ 2007ರಲ್ಲಿ ಸೇರಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಅವರು ಒಬ್ಬ ವ್ಯಕ್ತಿಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ. ಅದು ಬೇರೆ ಯಾರೂ ಅಲ್ಲ, ಅವರ ಪತಿ ಅಭಿಷೇಕ್ ಬಚ್ಚನ್. ಅಭಿಷೇಕ್​ಗೆ ಇನ್​ಸ್ಟಾಗ್ರಾಂನಲ್ಲಿ 73 ಲಕ್ಷ ಫಾಲೋಯರ್ಸ್ ಇದ್ದು ಅವರು 331 ಖಾತೆಗಳನ್ನು ಫಾಲೋ ಮಾಡುತ್ತಿದ್ದಾರೆ. ಅದರಲ್ಲಿ ಬಹುತೇಕ ಖಾತೆಗಳು ಯಾರದ್ದೂ ಪರ್ಸನಲ್ ಖಾತೆ ಆಗದೆ, ಪೇಜ್​ಗಳಾಗಿವೆ.

ಐಶ್ವರ್ಯಾ ಇದುವರೆಗೆ 257 ಪೋಸ್ಟ್​ಗಳನ್ನು ಇನ್​ಸ್ಟಾಗ್ರಾಂನಲ್ಲಿ ಮಾಡಿದ್ದಾರೆ. ಸದಾ ಆ್ಯಕ್ಟಿವ್ ಇರದ ಅವರು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಇನ್​ಸ್ಟಾಗ್ರಾಂ ಅನ್ನು ಮರೆಯುವುದಿಲ್ಲ ಎನ್ನಬಹುದು. ಜೂನ್ 18ಕ್ಕೆ ತಮ್ಮ ನಟನೆಯ ಹಮ್ ದಿಲ್ ದೇ ಚುಕೇ ಸಿನಿಮಾಕ್ಕೆ 22 ವರ್ಷವಾಗಿದ್ದು, ಅದರ ಖುಷಿಯನ್ನು ಹಂಚಿಕೊಂಡಿದ್ದರು. ಅದಕ್ಕೂ ಮೊದಲು ಅವರ ತಾಯಿಯ ಜನ್ಮದಿನದ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net