

ಯಾರಾ ಶೂಮೇಕರ್ ಅವರ ಕಪ್ಪು ಬಣ್ಣದ ವೆಲ್ವೆಟ್ ವಸ್ತ್ರವಿನ್ಯಾಸದಲ್ಲಿ ಮಿಂಚಿದ ಐಶ್ವರ್ಯಾ ರೈ
ಈವೆಂಟ್‌ನಲ್ಲಿ ಸಿಮೋನ್ ಆಶ್ಲೇ, ಸೆಲಿನ್ ಡಿಯೋನ್, ಇವಾ ಲಂಗೋರಿಯಾ ಮತ್ತು ಕೆಂಡಲ್ ಜೆನ್ನರ್ ಸಾಥ್
ರಾಣಿ ಸಾಕ್ಷಾತ್ ರಾಜವಂಶದವರಂತೆ ಕಾಣುತ್ತಿದ್ದಾರೆ ಎಂದ ಅಭಿಮಾನಿಗಳು
Aishwarya Rai brings her queen era to Paris Fashion Week: ಜಾಗತಿಕ ಮಟ್ಟದಲ್ಲಿ ಬಾಲಿವುಡ್ನ ಸ್ಟಾರ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರು ತಮ್ಮ ಕ್ವೀನ್ ಎರಾ ಕಳೆಯನ್ನು ಮರಳಿ ತಂದಿದ್ದಾರೆ. ಸೆ.28ರಂದು ನಡೆದ ಪ್ಯಾರಿಸ್ ಪ್ಯಾಷನ್ ವೀಕ್ನಲ್ಲಿ ಭಾಗಿಯಾಗಿದ್ದ ಅವರು, ತಮ್ಮ ಬೋಲ್ಡ್ ಹೇರ್ ಕಲರ್ ಮತ್ತು ಬ್ಲಾಕ್ ಗೌನ್ ಹಾಗೂ ತಲೆಗೆ ತೊಟ್ಟಿದ್ದ ವಜ್ರದ ಕಿರೀಟದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಐಫೆಲ್ ಟವರ್ ಮತ್ತು ಎಕೋಲ್ ಮಿಲಿಟೈರ್ ಹಿನ್ನೆಲೆಯ ಪ್ಲೇಸ್ ಜೋಫ್ರೆ ವೇದಿಕೆಯಲ್ಲಿ ನಡೆದ ಲೊರಿಯಲ್ ಪ್ಯಾರಿಸ್‌ನ 'ಲೆ ಡಿಫೈಲ್ - ಎಕ್ಸ್‌ಪ್ರೆಸ್ ಯುವರ್ ವರ್ತ್' ಕಾರ್ಯಕ್ರಮದಲ್ಲಿ ಐಶ್ವರ್ಯಾ ರೈ ಅವರು ಮೋಹಿತ್ ರೈ ಅವರ ಯಾರಾ ಶೋ ಮೇಕರ್ ವಿನ್ಯಾಸದ ಕಪ್ಪು ಗೌನ್ ತೊಟ್ಟು ರಾಂಪ್ ವಾಕ್ ಮಾಡಿದ್ದಾರೆ. ಅವರಿಗೆ ಆಶ್ಲೇ, ಸೆಲಿನ್ ಡಿಯೋನ್, ಇವಾ ಲಂಗೋರಿಯಾ ಮತ್ತು ಕೆಂಡಲ್ ಜೆನ್ನರ್ ಸೇರಿದಂತೆ ಹಲವರು ಸಾಥ್ ಕೊಟ್ಟರು.
ಈ ಶೋ ಗಾಗಿ ಐಶ್ವರ್ಯಾ, ಸಿರಿಯನ್ ಲಕ್ಸುರಿ ಲೇಬಲ್ 'ಯಾರಾ ಶೂಮೇಕರ್' ಅವರ ಶರತ್ಕಾಲ/ಚಳಿಗಾಲ 2026-27 ಕೌಚರ್ ಕಲೆಕ್ಷನ್‌ನ ಸಂಪೂರ್ಣ ಕಪ್ಪು ಬಣ್ಣದ ವೆಲ್ವೆಟ್ ಗೌನ್ ಧರಿಸಿದ್ದರು. ಈ ಲುಕ್ ಅನ್ನು ಖ್ಯಾತ ಸ್ಟೈಲಿಸ್ಟ್ ಮೋಹಿತ್ ರೈ ಸ್ಟೈಲ್ ಮಾಡಿದ್ದರು. ಅವರ ಹೆಗಲ ಮೇಲೆ ಕೇಪ್ ಧರಸಿದ್ದರು. ಅದಕ್ಕೆ ಹರಳುಗಳನ್ನು ಅಳವಡಿಸಿದ್ದು, ನಕ್ಷತ್ರದಂತೆ ಕಂಡಿದ್ದವು. ಜೊತೆಗೆ ಅವರ ಹೊಸ ಹೇರ್ ಸ್ಟೈಲ್ ಮತ್ತು ಅದಕ್ಕಚ್ಚಿದ್ದ ಬರ್ಗಂಡಿ ಕೆಂಪು ಬಣ್ಣವು ಆಕರ್ಷಿಸಿತು.
ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಮೋಹಿತ್ ರೈ, "ಅವರು 'ಎಕ್ಸ್‌ಪ್ರೆಸ್ ಯುವರ್ ವರ್ತ್' ಎಂದರು, ನಾವು 'ರಾಣಿ' ಎಂದು ಉತ್ತರಿಸಿದೆವು" ಎಂದು ಬರೆದುಕೊಂಡಿದ್ದಾರೆ.
ಫ್ಯಾಷನ್ ಶೋನಲ್ಲಿ ಐಶ್ವರ್ಯಾ ಜತೆಗೆ ಸಿಮೋನ್ ಆಶ್ಲೇ, ಸೆಲಿನ್ ಡಿಯೋನ್, ಇವಾ ಲಂಗೋರಿಯಾ ಮತ್ತು ಕೆಂಡಲ್ ಜೆನ್ನರ್ ಸೇರಿದಂತೆ ಅನೇಕ ಜಾಗತಿಕ ತಾರೆಯರು ಹಾಗೂ ಬ್ರ್ಯಾಂಡ್ ಅಂಬಾಸಿಡರ್‌ಗಳು ಭಾಗವಹಿಸಿದ್ದರು. ಐಶ್ವರ್ಯಾ ರೈ ಮತ್ತು ಖ್ಯಾತ ಗಾಯಕಿ ಸೆಲಿನ್ ಡಿಯೋನ್ ಪರಸ್ಪರ ಅಪ್ಪಿಕೊಂಡು ಮುತ್ತು ನೀಡಿ, ಕೈಹಿಡಿದು ಒಟ್ಟಿಗೆ ಹೆಜ್ಜೆಹಾಕಿದ್ದಾರೆ. ಈ ವಿಡಿಯೋಗಳು ಸದ್ಯ ಎಕ್ಸ್ನಲ್ಲಿ ವೈರಲ್ ಆಗಿದೆ.
ಎಕ್ಸ್ನಲ್ಲಿ ಪೋಸ್ಟ್ಗಳ ಸುರಿಮಳೆ
ಗ್ರೋವಿ ಎಂಬುವವರು ಐಶ್ವರ್ಯಾ ರೈ ಅವರ ರ್ಯಾಂಪ್ ವಾಕ್ ವಿಡಿಯೋ ಹಂಚಿಕೊಂಡಿದ್ದು Once a Queen, Forever a Queen ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸಾಕ್ಷಾತ್ ರಾಜವಂಶದವರಂತೆ ಕಾಣುತ್ತಿದ್ದಾರೆ ಎಂದು ಬಣ್ಣಿಸಿದ್ದಾರೆ. ಐಶ್ವರ್ಯ ರೈ ಮತ್ತು ಸೆಲಿನ್ ಡಿಯೋನ್ ಒಟ್ಟಾಗಿ ಕಾಣಿಸಿಕೊಂಡಿರುವುದು ಒಂದು MOTHERQUAKE ಎಂದು ಬಣ್ಣಿಸಿದ್ದಾರೆ. ಹಲವರು ನಾನಾ ರೀತಿ ಕಾಮೆಂಟ್ ಮಾಡುತ್ತಿದ್ದಾರೆ.ಐಶ್ವರ್ಯಾ ಅವರ ನಡಿಗೆ, ಗತ್ತು ಮತ್ತು ಗ್ರೇಸ್ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ, (ಏಜೆನ್ಸೀಸ್).