ವೆಬ್​ಸರಣಿಗಳತ್ತ ಎಲ್ಲರ ಒಲವು; ವೆಬ್​ಸಿರೀಸ್​ಗೆ ಐಂದ್ರಿತಾ ರೇ

AIDRITA
Published on

ಬೆಂಗಳೂರು: ವೆಬ್​ಸರಣಿಗಳತ್ತ ಎಲ್ಲರ ಒಲವು ಹೆಚ್ಚಾಗುತ್ತಿದೆ. ಸ್ಟಾರ್ ಕಲಾವಿದರು ಡಿಜಿಟಲ್ ವೇದಿಕೆಯತ್ತ ಗಮನಹರಿಸುತ್ತಿದ್ದಾರೆ. ಕನ್ನಡ ಚಿತ್ರರಂಗವೂ ಆ ಬದಲಾವಣೆಯ ಗಾಳಿಗೆ ಒಗ್ಗಿಕೊಂಡು ತುಂಬ ದಿನಗಳೇ ಆಗಿವೆ. ಹಾಗೆಯೇ ಸದ್ದಿಲ್ಲದೆ, ಸ್ಯಾಂಡಲ್​ವುಡ್ ನಟಿ ಐಂದ್ರಿತಾ ರೇ ಮೊದಲ ಬಾರಿ ವೆಬ್​ಸರಣಿಯಲ್ಲಿ ನಟಿಸುತ್ತಿದ್ದಾರೆ.

ಆದರೆ, ಅದು ಕನ್ನಡದ್ದಲ್ಲ. ಬದಲಿಗೆ ಹಿಂದಿಯಲ್ಲಿ ಸಿದ್ಧವಾದ ‘ದಿ ಕೆಸಿನೋ’ದಲ್ಲಿ. ಹೌದು, ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವ ಐಂದ್ರಿತಾ, ಆ ಗ್ಯಾಪ್​ನಲ್ಲೇ ಹಿಂದಿಯಲ್ಲಿ ತಯಾರಾಗಿರುವ ‘ದಿ ಕೆಸಿನೋ’ ವೆಬ್​ಸಿರೀಸ್​ನಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.

ಈಗಾಗಲೇ ಅದರ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡು, ಅದರ ಬಿಡುಗಡೆಗೂ ಕಾಯುತ್ತಿದ್ದಾರೆ. ಅಂದಹಾಗೆ, ‘ದಿ ಕೆಸಿನೋ’ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿದ್ಧವಾಗುತ್ತಿರುವ ವೆಬ್​ಸಿರೀಸ್. 10 ಎಪಿಸೋಡ್​ಗಳಲ್ಲಿ ಇದು ಪ್ರಸಾರವಾಗಲಿದ್ದು, ಹಾರ್ದಿಕ್ ಗಜ್ಜರ್ ಆಕ್ಷನ್-ಕಟ್ ಹೇಳುವುದರ ಜತೆಗೆ ಸ್ವತಃ ಅವರೇ ಬಂಡವಾಳ ಹೂಡಿ ನಿರ್ವಪಕರಾಗಿದ್ದಾರೆ.

ಐಂದ್ರಿತಾ ರೇ ಜತೆಗೆ ಕರನ್​ವೀರ್ ಬೊಹ್ರಾ, ಸುಧಾಂಶು ಪಾಂಡೆ, ಮಂದನ್ ಕರ್ವಿು ಮುಖ್ಯಭೂಮಿಕೆಯಲ್ಲಿದ್ದಾರೆ. ಸದ್ಯ ನೇಪಾಳದಲ್ಲಿ ಇಡೀ ತಂಡ ಬೀಡು ಬಿಟ್ಟಿದ್ದು, ಹಲವು ಎಪಿಸೋಡ್​ಗಳ ಚಿತ್ರೀಕರಣ ಮುಗಿಸಿಕೊಂಡಿದೆ. ಏಪ್ರಿಲ್ 10ಕ್ಕೆ ಜೀ5ನಲ್ಲಿ ಈ ವೆಬ್​ಸರಣಿ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net