ಮತ್ತೆ ಬರಲಿದ್ದಾನೆ ಭಜರಂಗಿ ಭಾಯ್​ಜಾನ್​..

Bhaijaan
Published on

ಸಲ್ಮಾನ್ ಖಾನ್ ಅವರ ದೊಡ್ಡ ಹಿಟ್ ಚಿತ್ರಗಳ ಪೈಕಿ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ‘ಭಜರಂಗಿ ಭಾಯ್ಜಾನ್’ ಸಹ ಒಂದು. ರಾಕ್​ಲೈನ್ ವೆಂಕಟೇಶ್ ನಿರ್ವಣದ ಈ ಚಿತ್ರಕ್ಕೆ ‘ಬಾಹುಬಲಿ’ ಖ್ಯಾತಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ಚಿತ್ರ ಯಶಸ್ವಿಯಾದ ಹೊಸತರಲ್ಲಿ, ಅದರ ಮುಂದುವರೆದ ಭಾಗ ಬರುತ್ತದೆ ಎಂಬ ಸುದ್ದಿಯೊಂದು ಕೇಳಿಬಂದಿತ್ತು. ಆದರೆ, ಇದುವರೆಗೂ ‘ಭಜರಂಗಿ ಭಾಯ್ಜಾನ್ - 2’ ಬಂದಿಲ್ಲ. ಇನ್ನು, ಅಂಥದ್ದೊಂದು ಚಿತ್ರ ಬರುವ ಸಾಧ್ಯತೆಯೇ ಕಡಿಮೆ ಎನ್ನುವಾಗ ವಿಜಯೇಂದ್ರ ಪ್ರಸಾದ್ ಒಂದು ಸುದ್ದಿ ಕೊಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಭಜರಂಗಿ ಭಾಯ್ಜಾನ್’ ನ ಮುಂದುವರಿದ ಭಾಗದ ಕಥೆಯನ್ನು ಬರೆಯುತ್ತಿರುವುದಾಗಿಯೂ ಮತ್ತು ಈಗಾಗಲೇ ಈ ವಿಷಯವನ್ನು ಸಲ್ಮಾನ್ ಖಾನ್ ಜತೆಗೆ ರ್ಚಚಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ಸಲ್ಮಾನ್ ಒಂದಿಷ್ಟು ವಿಷಯಗಳನ್ನು ಹೇಳಿದ್ದೇನೆ. ಅವರು ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದು, ಅವೆಲ್ಲ ಮುಗಿದ ನಂತರ ಈ ಚಿತ್ರ ಶುರುವಾಗುವ ಸಾಧ್ಯತೆ ಇದೆ’ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ‘ಅಂತಿಮ್ ಎಂಬ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಇದೀಗ ‘ಟೈಗರ್ 3’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಟೈಗರ್ 3’ ನಂತರ, ಇನ್ನೂ ಎರಡ್ಮೂರು ಚಿತ್ರಗಳನ್ನು ಒಪ್ಪಿಕೊಂಡಿದ್ದು, ಅವೆಲ್ಲ ಮುಗಿದ ಮೇಲೆ ಮತ್ತೊಮ್ಮೆ ‘ಭಜರಂಗಿ ಭಾಯ್ಜಾನ್’ ಆಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net