30 ವರ್ಷಗಳಾದ್ರೂ ಮಾಸದ ಆ್ಯನಿಮೇಟೆಡ್​ ರಾಮಾಯಣ ಕ್ರೇಜ್​; ಇಂದಿನ ಜನರೇಷನ್​ಗೂ ಇಷ್ಟ ಜಪಾನ್–ಭಾರತದ ಈ ಯಶಸ್ವಿ ಪ್ರಯತ್ನ | Ramayana

 Ramayana
30 ವರ್ಷಗಳಾದ್ರೂ ಮಾಸದ ಆ್ಯನಿಮೇಟೆಡ್​ ರಾಮಾಯಣ ಕ್ರೇಜ್​; ಇಂದಿನ ಜನರೇಷನ್​ಗೂ ಇಷ್ಟ ಜಪಾನ್–ಭಾರತದ ಈ ಯಶಸ್ವಿ ಪ್ರಯತ್ನ | Ramayana
Published on: 

Ramayana: ಒಂದು ಕಾಲಘಟ್ಟದಲ್ಲಿ ದೂರದರ್ಶನದಲ್ಲಿ ಮಾತ್ರ ಪ್ರಸಾರವಾಗುತ್ತಿದ್ದ ರಾಮಾಯಣ ಕಥೆ, ಆ ನಂತರ 90ರ ದಶಕದಲ್ಲಿ ಜಪಾನ್ ಮತ್ತು ಭಾರತದ ಕಲಾವಿದರು ಸೇರಿ ಆ್ಯನಿಮೇಷನ್ ರೂಪದಲ್ಲಿ ಸೃಷ್ಟಿಸಿದ ಅದೇ ರಾಮಾಯಣದ ಚಿತ್ರವೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಈಗ ಮತ್ತೆ ಸದ್ದು ಮಾಡುತ್ತಿದ್ದು, ಜೆನ್​ಜೀಗಳ ಗಮನ ಸೆಳೆಯುತ್ತಿದೆ.

ರಾಮನಾಗಿ ರಣಬೀರ್ ಕಪೂರ್​, ಸೀತೆಯಾಗಿ ಸಾಯಿ ಪಲ್ಲವಿ ಮತ್ತು ರಾವಣನಾಗಿ ಯಶ್​ ಅಭಿನಯದ ರಾಮಾಯಣ ಹಿಂದಿ ಚಿತ್ರವು ಸದ್ಯ ದೇಶಿಯ ಮತ್ತು ಜಾಗತಿಕ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಕಾಣುತ್ತಿದೆ. ಮತ್ತೊಂದೆಡೆ, ಸಿನಿಮಾದ ಅಮೋಘ ದೃಶ್ಯಗಳು ನೋಡುಗರ ಗಮನ ಸೆಳೆದಿವೆ. ಇದೇ ಸಮಯದಲ್ಲಿ ಜೆನ್​ಜೀಗಳು, 1993ರಲ್ಲಿ ಬಿಡುಗಡೆಯಾದ ‘ರಾಮಾಯಣ: ದಿ ಲೆಜೆಂಡ್​ ಆಫ್​ ಪ್ರಿನ್ಸ್ ರಾಮಾ’ ಸಿನಿಮಾವನ್ನು ಮತ್ತೊಮ್ಮೆ ನೆನಪಿಸಿಕೊಂಡಿದ್ದು, ಮೂರು ದಶಕಗಳಾದರೂ ಈ ಚಿತ್ರದ ಕ್ರೇಜ್​ ಬಗ್ಗೆ ಗುಣಗಾನ ಮಾಡಿದ್ದಾರೆ.

1993ರಲ್ಲಿ ನಿರ್ಮಾಣಗೊಂಡ ಈ ಆ್ಯನಿಮೇಟೆಡ್​ ಚಿತ್ರವನ್ನು ಜಪಾನ್ ಮತ್ತು ಭಾರತದ ಕಲಾವಿದರು ಒಟ್ಟಾಗಿ ರೂಪಿಸಿದ ಚಿತ್ರವಾಗಿದೆ. ಯುಗೋ ಸಾಕೋ, ರಾಮ್ ಮೋಹನ್ ಮತ್ತು ಕೊಯಿಚಿ ಸಸಾಕಿ ನಿರ್ದೇಶನದ ಈ ಚಿತ್ರಕ್ಕೆ ವನರಾಜ್ ಭಾಟಿಯಾ ಸಂಗೀತ ನೀಡಿದ್ದಾರೆ. ರಾಮನ ವನವಾಸ, ಸೀತಾಪಹರಣ, ಹನುಮಂತನ ಲಂಕಾ ಪ್ರವೇಶ, ರಾಮಸೇತುವೆ ನಿರ್ಮಾಣ ಹಾಗೂ ರಾವಣನ ವಿರುದ್ಧದ ಯುದ್ಧದ ಕಥೆಯನ್ನು ಚಿತ್ರದಲ್ಲಿ ಸುಂದರವಾಗಿ ಕಟ್ಟಿಕೊಡಲಾಗಿದೆ.

ಸುಮಾರು 450 ಭಾರತೀಯ ಮತ್ತು ಜಪಾನಿ ಕಲಾವಿದರು ಹಲವು ವರ್ಷಗಳ ಕಾಲ ಶ್ರಮಿಸಿ 1 ಲಕ್ಷಕ್ಕೂ ಹೆಚ್ಚು ಕೈಯಿಂದ ಬಿಡಿಸಿದ ಅನಿಮೇಷನ್ ಚಿತ್ರಣಗಳನ್ನು ಈ ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ. ಆಧುನಿಕ ಚಿತ್ರಗಳಲ್ಲಿರುವ ಅದ್ದೂರಿ ವಿಎಫ್​ಎಕ್ಸ್​, ಗ್ರಾಫಿಕ್ಸ್ ಇಲ್ಲದಿದ್ದರೂ, ಕೈಯಿಂದ ಬಿಡಿಸಿದ ದೃಶ್ಯಗಳು, ಹಿನ್ನೆಲೆ ಚಿತ್ರಣ ಮತ್ತು ಸಂಗೀತ ವಿಶೇಷ ಮೆಚ್ಚುಗೆಗೆ ಪಾತ್ರವಾಗಿವೆ. ಅದರಲ್ಲೂ ಹನುಮಂತನ ಪಾತ್ರ ಹಾಗೂ ಲಂಕಾ ಪ್ರವೇಶದ ದೃಶ್ಯಗಳು ಚಿತ್ರದ ಪ್ರಮುಖ ಆಕರ್ಷಣೆಗಳು ಎಂದರೆ ತಪ್ಪಾಗಲಾರದು.

Also Read
ಕ್ಷಣಾರ್ಧದಲ್ಲಿ ಜನರ ಎದುರೇ ಬದಲಾಗುತ್ತೆ ಮುಖದ ಬಣ್ಣ, ಭಾವನೆ! ಚೀನಾದ 300 ವರ್ಷಗಳ ಕಲೆ ಬಗ್ಗೆ ಇಲ್ಲಿದೆ ರೋಚಕ ಮಾಹಿತಿ
 Ramayana

1993ರಲ್ಲಿ ಮೊದಲ ಪ್ರದರ್ಶನ ಕಂಡಿದ್ದ ಈ ಸಿನಿಮಾ, 2025ರ ಜನವರಿ 24ರಂದು ಡಿಜಿಟಲ್ 4K ರೂಪದಲ್ಲಿ ಭಾರತದ ಹಲವಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇಂದಿನ ಟೆಕ್ನಾಲಜಿ, ಎಐ ಯುಗ ಎಷ್ಟೇ ಮುಂದುವರಿದಿದ್ದರೂ, ಅಂದಿನ ಚಿತ್ರದ ಕಲಾತ್ಮಕತೆ ಮತ್ತು ಕಥೆಯ ಮೇಲಿನ ಪ್ರಾಮಾಣಿಕತೆ ಮೂರು ದಶಕಗಳ ಬಳಿಕವೂ ಪ್ರೇಕ್ಷಕರ ಗಮನ ಸೆಳೆಯುತ್ತಿದೆ ಎಂದರೆ ನೀವೇ ಅರ್ಥ ಮಾಡಿಕೊಳ್ಳಿ, ಆ ಸಿನಿಮಾಗಳ ಪ್ರಭಾವ ಎಷ್ಟರ ಮಟ್ಟಿಗಿತ್ತು ಎಂಬುದು. ಇಂದಿಗೂ ಇಂತಹ ಅನೇಕ ಚಿತ್ರಗಳು ಜೆನ್​ಜೀಗಳ ಕಣ್ಣಿನಲ್ಲಿ ಕಟ್ಟಿದಂತಿವೆ ಎಂದೇ ಹೇಳಬಹುದು,(ಏಜೆನ್ಸೀಸ್).