

ಬೆಂಗಳೂರು: ಕಿಚ್ಚ ಸುದೀಪ್ ಸದ್ಯ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಸಿನಿಮಾ ಶೂಟಿಂಗ್ನಲ್ಲಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ತಂಡ ಕೊನೇ ಹಂತದ ಚಿತ್ರೀಕರಣವನ್ನು ಕೇರಳದಲ್ಲಿ ಮಾಡಿಕೊಳ್ಳುತ್ತಿದೆ. ಶೂಟಿಂಗ್ನ ಬಿಡುವಿನ ವೇಳೆಯಲ್ಲಿಯೇ 15 ವರ್ಷದ ಹಿಂದಿನ ನೆನಪಿನ ಮನೆಗೆ ಸುದೀಪ್ ಭೇಟಿ ನೀಡಿ ಬಂದಿದ್ದಾರೆ.
ಹೌದು, ಸುದೀಪ್ ನಟಿಸಿ ನಿರ್ದೇಶನ ಮಾಡಿದ್ದ ಮೈ ಆಟೋಗ್ರಾಫ್ ಸಿನಿಮಾ ತೆರೆಕಂಡು 15 ವರ್ಷಗಳಾದವು. ಇದೀಗ ಕಾಕತಾಳೀಯವೆಂಬಂತೆ ಆ ಚಿತ್ರದ ಶೂಟಿಂಗ್ ಸ್ಥಳಕ್ಕೆ ಸುದೀಪ್ ಭೇಟಿ ನೀಡಿದ್ದಾರೆ. ಅಂದಿನ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.
15 ವರ್ಷದ ನಂತರ ಈ ಸ್ಥಳಕ್ಕೆ ಬರುತ್ತಿದ್ದೇನೆ. ಅದಾದ ಬಳಿಕ ಇದೇ ಮೊದಲ ಬಾರಿಗೆ ಈ ಸ್ಥಳಕ್ಕೆ ಬರುತ್ತಿದ್ದೇನೆ ಎಂದಿರುವ ಸುದೀಪ್ ಎಲ್ಲೆಲ್ಲಿ ಯಾವ್ಯಾವ ದೃಶ್ಯಗಳನ್ನು ಶೂಟಿಂಗ್ ಮಾಡಿದ್ವಿ ಎಂಬುದನ್ನು ಒಂದೊಂದಾಗಿಯೇ ವಿವರಿಸಿದ್ದಾರೆ. ಅಷ್ಟೇ ಅಲ್ಲ ಒಂದಷ್ಟು ನೆನಪುಗಳು ಯಾವತ್ತೂ ಮರೆಯಾಗುವುದಿಲ್ಲ. ಅವುಗಳಲ್ಲಿ ಆಟೋಗ್ರಾಫ್ ಸಹ ಬಂದು ಎಂದಿದ್ದಾರೆ. ಆ ವಿಡಿಯೋ ತುಣುಕು ಇಲ್ಲಿದೆ.