ನಟಿಯರಿಂದ ದತ್ತು ಸ್ವೀಕಾರ

Priyanka
Published on

ಬೆಂಗಳೂರು: ರಾಜ್ಯದ ಮೃಗಾಲಯಗಳಲ್ಲಿನ ಸ್ಥಿತಿ ಕಂಡು ಸ್ಯಾಂಡಲ್​ವುಡ್​ ನಟ ದರ್ಶನ್​ ಪ್ರಾಣಿ, ಪಗಳನ್ನು ದತ್ತು ಸ್ವೀಕರಿಸುವಂತೆ ಮನವಿ ಮಾಡಿದ್ದರು. ಆ ಒಂದು ಮಾತಿಗೆ ಅಭೂತ ಪೂರ್ವ ಬೆಂಬಲ ಸಿಕ್ಕಿದ್ದು ಗೊತ್ತಿರುವ ವಿಚಾರ. ವಾರದಲ್ಲಿ ಕೋಟಿ ರೂ.ಗೂ ಅಧಿಕ ಮೊತ್ತ ಸಂಗ್ರಹವಾಗಿದೆ. ಇದೀಗ ಸ್ಯಾಂಡಲ್​ವುಡ್​ನ ನಟಿಯರಾದ ಪ್ರಿಯಾಂಕಾ ತಿಮ್ಮೇಶ್​ ಮತ್ತು ಅದ್ವಿತಿ ಶೆಟ್ಟಿ ದತ್ತು ಸ್ವೀಕಾರ ಮಾಡಿದ್ದಾರೆ.

ಮೈಸೂರು ಮೃಗಾಲಯದಲ್ಲಿನ ಬ್ಲಾಕ್​ ಬಕ್​ ಪ್ರಾಣಿಯನ್ನು ಪ್ರಿಯಾಂಕಾ ದತ್ತು ಪಡೆದರೆ, ಅದ್ವಿತಿ ಶೆಟ್ಟಿ ನಕ್ಷತ್ರ ಆಮೆಯನ್ನು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ಪ್ರಾಣಿ ದತ್ತು ಪಡೆಯುವುದಕ್ಕೆ ದರ್ಶನ್​ ಅವರೇ ಸ್ಫೂರ್ತಿ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net