

ಹೈದರಾಬಾದ್: ನಂದಮೂರಿ ಬಾಲಕೃಷ್ಣ ಅಭಿನಯದ ಸೂಪರ್ ಹಿಟ್ ಚಿತ್ರಗಳ ಪೈಕಿ 'ಆದಿತ್ಯ 369' ಚಿತ್ರವೂ ಒಂದು. ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದ ಈ ಚಿತ್ರವು ತೆಲುಗಿನ ಮೊದಲ ಸೈನ್ಸ್ ಫಿಕ್ಷನ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದರ ಜತೆಗೆ ಟೈಮ್ ಮೆಷೀನ್ ಕುರಿತಾದ ಚಿತ್ರವಾಗಿತ್ತು.
ಇದನ್ನೂ ಓದಿ: ಕ್ಲೈಮ್ಯಾಕ್ಸ್ ಹಂತಕ್ಕೆ ಬಂದ ‘ಅನ್ಲಾಕ್ ರಾಘವ’ …
ಈ ಚಿತ್ರದ ಮುಂದಿನ ಭಾಗ ಬರುತ್ತದೆ ಎಂಬ ಸುದ್ದಿ ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. ಆದರೆ, ಚಿತ್ರ ಕಾರಣಾಂತರಗಳಿಂದ ಶುರುವಾಗಿರಲಿಲ್ಲ. ಇದೀಗ ಆ ಸೀಕ್ವೆಲ್ನ ಕೆಲಸಗಳು ಶುರುವಾಗಿದ್ದು, ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂಬ ಸುದ್ದಿಯನ್ನು ಸ್ವತಃ ನಂದಮೂರಿ ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಈ ಚಿತ್ರದ ಹೆಸರೇನು ಗೊತ್ತಾ? 'ಆದಿತ್ಯ 999'.
ಹೌದು, 'ಆದಿತ್ಯ 369' ಚಿತ್ರದ ಮುಂದುವರೆದ ಭಾಗಕ್ಕೆ 'ಆದಿತ್ಯ 999' ಎಂಬ ಹೆಸರನ್ನು ಇಡಲಾಗಿದ್ದು, ಈ ಚಿತ್ರವನ್ನು ನಂದಮೂರಿ ಬಾಲಕೃಷ್ಣ ಅವರೇ ನಿರ್ದೇಶನ ಮಾಡಲಿದ್ದಾರಂತೆ. ಇನ್ನೊಂದು ವಿಶೇಷತೆಯೆಂದರೆ, ಬಾಲಕೃಷ್ಣ ಅವರ ಮಗ ಮೋಕ್ಷಜ್ನ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರಂತೆ. ಮಗನ ಜತೆಗೆ ಬಾಲಯ್ಯ ಸಹ ತೆರೆ ಹಂಚಿಕೊಳ್ಳಲಿದ್ದಾರಂತೆ.
ಸದ್ಯ, ಅನಿಲ್ ರಾವಿಪುಡಿ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿರುವ ಬಾಲಕೃಷ್ಣ, ಅದನ್ನು ಮುಗಿಸಿ 'ಆದಿತ್ಯ 999'ನತ್ತ ಹೋಗಲಿದ್ದಾರೆ. ರಾಮೋಜಿ ಫಿಲಂ ಸಿಟಿಯಲ್ಲಿ ಅಪ್ಪ-ಮಗ ಇಬ್ಬರೂ ಈ ಚಿತ್ರದಲ್ಲಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಇತ್ತೀಚೆಟ್ಟ ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಆ ಸೆಟ್ಗೆ ಭೇಟಿ ಕೊಟ್ಟು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.