ಪರ್ಫೆಕ್ಟ್ ಗರ್ಲ್ ಆದ ಅದಿತಿ...

Aditi
Published on

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಸದ್ಯ ಸಾಲುಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ನಟಿ ಅದಿತಿ ಪ್ರಭುದೇವ, ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಊರಲ್ಲಿಯೇ ಕಾಲಕಳೆದಿದ್ದರು. ಇದೀಗ ಸಿನಿಮಾ ಕೆಲಸಗಳು ಶುರುವಾಗುತ್ತಿದ್ದಂತೆ ಮತ್ತೆ ಸೆಟ್​ಗೆ ಮರಳಿದ್ದಾರೆ. ಆ ಶೂಟಿಂಗ್ ಗ್ಯಾಪ್​ನಲ್ಲೇ ಆಲ್ಬಂ ಹಾಡಿಗೆ ಹೆಜ್ಜೆಯನ್ನೂ ಹಾಕಿದ್ದಾರೆ.

‘ಪರ್ಫೆಕ್ಟ್ ಗರ್ಲ್’ ಶೀರ್ಷಿಕೆಯ ಪಕ್ಕಾ ಕನ್ನಡ ಹಾಡಿನಲ್ಲಿ ಕಲರ್​ಫುಲ್ ಕಾಸ್ಟ್ಯೂಮ್ ತೊಟ್ಟು ಮಿಂಚುಹರಿಸಿದ್ದಾರೆ ಅದಿತಿ. ಈಗಾಗಲೇ ಅದರ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಶೀಘ್ರದಲ್ಲಿಯೇ ಆ ಹಾಡನ್ನು ಆನಂದ್ ಆಡಿಯೋ ಯೂಟ್ಯೂಬ್​ನಲ್ಲಿ ಕಣ್ತುಂಬಿಕೊಳ್ಳಬಹುದು. ‘ಇಲ್ಲಿಯವರೆಗೆ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದ ನನಗೆ ಆಲ್ಬಂ ಸಾಂಗ್ ಹೊಸದು. ಇದೇ ಮೊದಲ ಬಾರಿಗೆ ಪರ್ಫೆಕ್ಟ್ ಗರ್ಲ್ ಹಾಡಿಗೆ ಹೆಜ್ಜೆ ಹಾಕಿದ್ದೇನೆ.

ಬೆಂಗಳೂರು ಹೊರವಲಯದಲ್ಲಿ ಎರಡೇ ದಿನಗಳಲ್ಲಿ ಹಾಡಿನ ಶೂಟಿಂಗ್ ಮಾಡಲಾಗಿದೆ. ಇಲ್ಲಿಯವರೆಗೂ ನಾನು ನಟಿಸಿದ ಸಿನಿಮಾಗಳಲ್ಲಿ ಹೇಗೆ ನನ್ನ ತೋರಿಸಲಾಗಿತ್ತೋ, ಅದೇ ತರಹ ಇಲ್ಲಿಯೂ ಬಗೆಬಗೆ ಕಾಸ್ಟೂ ್ಯå್ಗಳಲ್ಲಿ ಮಾಡರ್ನ್ ಜತೆಗೆ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ಅದಿತಿ.

ಅಭಿ ಮಲ್ಟಿ ಎಂಬುವವರು ಈ ಹಾಡಿಗೆ ಸಾಹಿತ್ಯ ಬರೆಯುವುದರ ಜತೆಗೆ ಧ್ವನಿಯನ್ನೂ ನೀಡಿದ್ದಾರೆ. ಸಂಯೋಜನೆಯೂ ಅವರದ್ದೇ, ಹಾಡಿನ ನಿರ್ವಪಕರೂ ಅವರೇ. ಅಭಿಷೇಕ್ ಮಠದ್ ನೃತ್ಯ ನಿರ್ದೇಶನ ಮಾಡಿದರೆ, ಶಿವಸೇನ ಛಾಯಾಗ್ರಹಣ ನಿಭಾಯಿಸಿದ್ದಾರೆ. ಬ್ಯಾಸಿಕ್ಸ್ ಅವರ ಸಂಗೀತ, ಮಹೇಶ್ ಸಂಕಲನ ಮಾಡಿದ್ದಾರೆ. ಚಂದನ್ ಗೌಡ ಕಾಸ್ಟೂಮ್ ವಿನ್ಯಾಸ ಮಾಡಿದ್ದಾರೆ. ಇನ್ನು ಇತ್ತ ಸಿನಿಮಾ ವಿಚಾರವಾಗಿ ಬಂದರೆ, ಸದ್ಯ ನಿರ್ದೇಶಕ ಶ್ರೀನಿ ಅವರ ‘ಓಲ್ಡ್ ಮಾಂಕ್’ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಅದಿತಿ ಸಹ ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net