Kangaroo Teaser ; ಹೊಸ ಸಸ್ಪೆನ್ಸ್​ ಥ್ರಿಲ್ಲರ್​ನಲ್ಲಿ ಆದಿತ್ಯ ಮತ್ತು ರಂಜಿನಿ ರಾಘವನ್​ ಮಿಂಚು

Kangaroo_(170)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆದಿತ್ಯ ಮತ್ತು ರಂಜಿನಿ ರಾವನ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಕಿಶೋರ್​ ಮೇಗಳಮನೆ ಆ್ಯಕ್ಷನ್​&ಕಟ್​ ಹೇಳಿರುವ ಚಿತ್ರ "ಕಾಂಗರೂ'. ಇತ್ತೀಚೆಗಷ್ಟೆ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧೀಂದ್ರ ವೆಂಕಟೇಶ್​ ಚಿತ್ರದ ಟ್ರೇಲರ್​ ರಿಲೀಸ್​ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ನಿರ್ದೇಶಕ ಕಿಶೋರ್​, "ಇದೊಂದು ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ. ಕನ್ನಡದಲ್ಲಿ ಹಲವು ಸಸ್ಪೆನ್ಸ್​ ಥ್ರಿಲ್ಲರ್​ಗಳು ಬಂದಿವೆಯಾದರೂ, ನಮ್ಮ ಸಿನಿಮಾ ಸ್ವಲ್ಪ ವಿಭಿನ್ನ. ಫ್ಯಾಮಿಲಿ ಆಡಿಯನ್ಸ್​ಗಾಗಿಯೇ ಮಾಡಿರುವ ಕಥೆ. ಕಾಂಗರೂ ಯಾರ ತಂಟೆಗೂ ಹೋಗದ ಮೃದು ಸ್ವಭಾವದ ಪ್ರಾಣಿ. ಆದರೆ, ತನ್ನ ಮಕ್ಕಳ ತಂಟೆಗೆ ಯಾರಾದರೋ ಹೋದರೆ, ಅದು ಅವರನ್ನು ಬಿಡುವುದಿಲ್ಲ. ಇದೇ ಕಥೆ ಸಾರಾಂಶ' ಎಂದು ಮಾಹಿತಿ ನೀಡಿದರು.

ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬಂದಿದೆ. ನಾಯಕ ಆದಿತ್ಯ, "ಕಿಶೋರ್​ ಕಥೆ ಹೇಳಿದಾಗ ಓಕೆ ಎಂದೆ. ಬಳಿಕ ಅವರು ಚಿತ್ರದ ಕಥೆಯನ್ನು ಆ್ಯನಿಮೇಷನ್​ ಮೂಲಕ ತೋರಿಸಿದರು. ಬಹುಶಃ ಹೀಗೆ ಮಾಡಿದ ಮೊದಲ ನಿರ್ದೇಶಕ ಅವರೇ ಇರಬಹುದು. ನಾನಿಲ್ಲಿ ಪೊಲೀಸ್​ ಪಾತ್ರದಲ್ಲಿ ನಟಿಸಿದ್ದೇನೆ' ಎಂದರು. ನಾಯಕ ರಂಜಿನಿ, "ನಾನು ಮನೋವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ನಾಯಕಿಯಾಗಿ ನಟಿಸಿರುವ ಐದನೇ ಚಿತ್ರವಿದು' ಎಂದು ಹೇಳಿಕೊಂಡರು.

ಉಳಿದಂತೆ ನಾಗೇಂದ್ರ ಅರಸ್​, ಅಶ್ವಿನ್​ ಹಾಸನ್​, ಶುಭಲಕ್ಷಿ$್ಮ, ಗೌತಮ್​ ತಾರಾಗಣದಲ್ಲಿದ್ದಾರೆ. ಆರೋಹ ಪ್ರೊಡಕ್ಷನ್ಸ್​ ಲಾಂಛನದಲ್ಲಿ ಚನ್ನಕೇಶವ ಬಿ.ಸಿ. ಕುಣಿಗಲ್​, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್​ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರಮಂಡ್ಯ ಮತ್ತು ಕೆಜಿಆರ್​ ಗೌಡ "ಕಾಂಗರೂ' ಸಿನಿಮಾ ನಿರ್ಮಿಸಿದ್ದಾರೆ. ಮೇ 3ರಂದು ಚಿತ್ರ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net