ಬೆಂಗಳೂರು: ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಅದಿತಿ ಪ್ರಭುದೇವ, ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಹೌದು, ಇತ್ತೀಚೆಗೆ ತಾನೆ ಎಂಗೇಜ್ ಆಗಿರೋ ನಟಿ ಅದಿತಿ ಈ ಬಾರಿ ಹಬ್ಬಕ್ಕೆ ಭರ್ಜರಿಯಾಗಿಯೇ ಶಾಪಿಂಗ್ ಅನ್ನು ತಮ್ಮ ಹುಟ್ಟು ಹಬ್ಬದಂದೇ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅದರಲ್ಲೂ, ನಟಿ ಶಾಪಿಂಗ್ ಎಲ್ಲಿ ಮಾಡಿದ್ದಾರೆ ಎಂಬುದು ನಿಮಗೆ ತಿಳಿದರೆ ಶಾಕ್ ಆಗುವುದು ಪಕ್ಕಾ. ಅಂದಹಾಗೆ, ನಮ್ಮ ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರೋದಕ್ಕೆ ನಟಿ ಅದಿತಿ ಆನ್ ಲೈನ್ ಶಾಪಿಂಗ್ ಮೊರೆ ಹೋಗಿದ್ದಾರಂತೆ.