'ಆದಿಪುರುಷ್' 5ನೇ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಮಾಹಿತಿ

adipurush
adipurush collection
Published on

ತೆಲಂಗಾಣ: ಡಾರ್ಲಿಂಗ್ ಪ್ರಭಾಸ್(Darling Prabhas) ಮತ್ತು ಕೃತಿ ಸನನ್(Kriti Sanon) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಆದಿಪುರುಷ್(Adipurush) ಚಿತ್ರ ಇದೀಗ ಸಾಕಷ್ಟು ವಿವಾದಗಳ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದೆ.

ಕಳೆದ ಶುಕ್ರವಾರ ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪ್ಯಾನ್-ಇಂಡಿಯನ್(Pan India) ಆದಿಪುರುಷ್ ಸಿನಿಮಾ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರ ಬಿಡುಗಡೆಗೊಂಡು ಇದೀಗ 5ನೇ ದಿನಕ್ಕೆ ಕಾಲಿಟ್ಟಿದ್ದು, ಕೇವಲ ಆಂಧ್ರಪ್ರದೇಶ(Andrapradesh) ಮತ್ತು ತೆಲಂಗಾಣದಲ್ಲಿ(Telangana) 75.70 ಕೋಟಿ ರೂ. ಕಲೆಕ್ಷನ್ ಕಂಡಿದೆ! ಮೊದಲ ಐದು ದಿನಗಳ ಪ್ರದೇಶವಾರು ಚಿತ್ರದ ಒಟ್ಟು ಗಳಿಕೆಯ ಮಾಹಿತಿ ಇಲ್ಲಿದೆ.

ನಿಜಾಮ್: 34.31 ಕೋಟಿ ರೂ.

ಸೆಡೆಡ್: 10.17 ಕೋಟಿ ರೂ.

ಯುಎ: 9.03 ಕೋಟಿ ರೂ.

ಪೂರ್ವ: 5.35 ಕೋಟಿ ರೂ.

ಪಶ್ಚಿಮ: 4.35 ಕೋಟಿ ರೂ.

ಗುಂಟೂರು: 6.23 ಕೋಟಿ ರೂ.

ಕೃಷ್ಣ: 4.16 ಕೋಟಿ ರೂ.

ನೆಲ್ಲೂರು: 2.10 ಕೋಟಿ ರೂ.

ಆದಿಪುರುಷ್ ಚಿತ್ರದ ತೆಲುಗು ಆವೃತ್ತಿಯು ವಿಶ್ವಾದ್ಯಂತ ಮಾಡಿರುವ ಕಲೆಕ್ಷನ್ 95 ಕೋಟಿ ರೂ.ಗಳನ್ನು ತಲುಪಿದೆ. ಸಿನಿ ಲೆಕ್ಕಾಚಾರಗಳ ಪ್ರಕಾರ ಈ ಚಿತ್ರವು ಮುಂದಿನ ವಾರಗಳಲ್ಲಿ ಇನ್ನೂ ಹೆಚ್ಚಿನ ಆದಾಯವನ್ನು ಗಳಿಸುತ್ತದೆ ಎಂದು ನಿರೀಕ್ಷಿಸಿದ್ದಾರೆ. ಚಿತ್ರದಲ್ಲಿ ನಟ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್, ದೇವನಾಗ್ ದತ್ತಾ, ಸನ್ನಿ ಸಿಂಗ್, ಸೋನಾಲ್ ಚೌಹಾನ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net