ಅರ್ಜುನ್​ ಕಿಸ್​ಗೆ ನೂರರ ಸಂಭ್ರಮ

adduri lovers move
Published on

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಾಲ್ಕು ವಾರ ಸಿನಿಮಾ ಓಡುವುದೇ ಕಷ್ಟ ಅಂತಹದ್ರಲ್ಲಿ, ಎ. ಪಿ. ಅರ್ಜುನ್ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ್ದ ‘ಕಿಸ್ ’ಚಿತ್ರ ಮೈಸೂರಿನ ಸಂಗಂ ಚಿತ್ರಮಂದಿರದಲ್ಲಿ ಮತ್ತು ಮೂರ್ನಾಲ್ಕು ಮಲ್ಟಿಪ್ಲೆಕ್ಸ್​ನಲ್ಲಿ ನೂರು ದಿನ ಯಶಸ್ವಿ ಪ್ರದರ್ಶನ ಕಂಡಿದ್ದು, ಅದನ್ನು ಚಿತ್ರತಂಡ ಇತ್ತೀಚೆಗೆ ಸಂಭ್ರಮಿಸಿತು.

ಈ ಶತದಿನದ ಕಾರ್ಯಕ್ರಮದಲ್ಲಿ ಅರ್ಜುನ್ ತಮ್ಮ ಬ್ಯಾನರ್​ನ ಮೂಲಕ ‘ಅದ್ಧೂರಿ ಲವರ್’ ಎಂಬ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ. ‘ಸಿನಿಮಾ ಚೆನ್ನಾಗಿದ್ದರೆ ಜನ ಕೈ ಬಿಡುವುದಿಲ್ಲ ಎನ್ನುವುದಕ್ಕೆ ‘ಕಿಸ್’ ಚಿತ್ರವೇ ಉದಾಹರಣೆ. ಮೈಸೂರಿನ ಸಂಗಂ ಚಿತ್ರಮಂದಿರದಲ್ಲಿ ಹತ್ತು ವರ್ಷಗಳ ಹಿಂದೆ ‘ಆಪ್ತ ರಕ್ಷಕ’ ನೂರು ದಿನಗಳ ಪ್ರದರ್ಶನ ಕಂಡಿತ್ತು. ಅದಾದ ಮೇಲೆ ನಮ್ಮ ಚಿತ್ರ ನೂರು ದಿನ ಓಡಿದೆ. ನನ್ನ ಚಿತ್ರ ರಿಲೀಸ್ ಆದ ಮೇಲೆ ಸೈರಾ, ವಾರ್ ಸೇರಿದಂತೆ 50ರಿಂದ 60 ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆದವು. ಅವೆಲ್ಲವುಗಳ ನಡುವೆ ಇದು ಯಶಸ್ವಿಯಾಗಿದೆ. ಇನ್ನು ಈ ಚಿತ್ರವನ್ನು ಹೆಚ್ಚು ಯುವಕ-ಯುವತಿಯರು ಇಷ್ಟಪಟ್ಟಿದ್ದಾರೆ. ಹಾಗಾಗಿ ಯಶಸ್ಸು ಸಿಕ್ಕಿದೆ’ಎನ್ನುತ್ತಾರೆ ನಿರ್ದೇಶಕ ಅರ್ಜುನ್. ‘ಕಿಸ್ ಚಿತ್ರವನ್ನು ವಿತರಣೆ ಮಾಡಿದ್ದ ಜಯಣ್ಣ, ಭೋಗೆಂದ್ರ ಅವರು ಥಿಯೇಟರ್ ಉಳಿಸಿಕೊಂಡು ಕನ್ನಡ ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿದ್ದರು.

ಇನ್ನು ನಮ್ಮ ಚಿತ್ರ ಪಿಕಪ್ ಆಗಿದ್ದೇ ಮೂರನೇ ವಾರದಿಂದ. ಇದಕ್ಕೆ ಕಾರಣವಾಗಿದ್ದು ಮಾಧ್ಯಮಗಳು ಹೀಗಾಗಿ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ಇದೇ ಸಮಯದಲ್ಲಿ ನನ್ನ ಬ್ಯಾನರ್​ನಿಂದ ‘ಅದ್ಧೂರಿ ಲವರ್’ ಸಿನಿಮಾವನ್ನು ಅನೌನ್ಸ್ ಮಾಡಿದ್ದು, ಇದನ್ನು ನಾನು ನಿರ್ದೇಶನ ಮಾಡುವುದಿಲ್ಲ. ಬದಲಿಗೆ ಸಂಭಾಷಣೆ ಮತ್ತು ಹಾಡುಗಳನ್ನು ಬರೆಯುತ್ತೇನೆ. ನಿರ್ದೇಶನ ಬೇರೆಯವರದ್ದು. ಇದೇ 26ಕ್ಕೆ ಮುಹೂರ್ತ ನಡೆಯಲಿದ್ದು, ಅಲ್ಲಿಯೇ ತಂತ್ರಜ್ಞರು, ನಾಯಕ, ನಾಯಕಿ ಎಲ್ಲರನ್ನು ಪರಿಚಯ ಮಾಡುತ್ತೇನೆ’ ಎನ್ನುವುದು ಅರ್ಜುನ್ ಅವರ ಮಾತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net