ಸೀರೆಯಲ್ಲಿ ರಶ್ಮಿಕಾ ಎಷ್ಟು ಚಂದ! ಅಬ್ಬಬ್ಬಾ... ಹೊಸ ಸಿನಿಮಾದ ಟೀಸರ್ ವೈರಲ್...

Published on
ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ತೆಲುಗಿನ ‘ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯೂಸಿ ಆಗಿದ್ದಾರೆ. ಹೌದು, ಗುರುವಾರ (ಫೆಬ್ರವರಿ-10) ಬಿಡುಗಡೆಯಾದ ಈ ಸಿನಿಮಾದ ಟೀಸರ್​ ಬಗ್ಗೆಯೇ ಎಲ್ಲೆಡೆ ಮಾತುಕತೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟೀಸರ್​ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಈಗ 2 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ. ಅದರಲ್ಲಿಯೂ, ನಟ ರಶ್ಮಿಕಾ ಮಂದಣ್ಣ ಅವರ ಸಖತ್​ ಟ್ರೆಡಿಷನಲ್​ ಲುಕ್ ಕಂಡು ಅಭಿಮಾನಿಗಳು ದಿಲ್ ಖುಷ್ ಆಗಿರುವುದಂತೂ ನಿಜ. ಹೋಮ್ಲಿ ಲುಕ್​ನಲ್ಲಿ ಕರುನಾಡ ಕ್ರಶ್ ತುಂಬಾ ಚೆನ್ನಾಗಿ ಕಾಣಿಸುತ್ತಿರುವುದು ಹೈಲೈಟ್. ಟೀಸರ್​ನಲ್ಲಿನ ನಟಿಯ ಸೀರೆ ಲುಕ್​ಗಳು ಇದೀಗ ಫೋಟೋಗಳಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
‘ಆಡವಾಳ್ಳು ಮೀಕು ಜೋಹಾರ್ಲು' ಸಿನಿಮಾ ರಿಲೀಸ್​ಗೆ ರೆಡಿ ಆಗಿದ್ದು, ನಟ ಶರ್ವಾನಂದ್ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಈ ಚಿತ್ರದಲ್ಲಿ ನಾಯಕಿ ಮತ್ತು ನಾಯಕನಾಗಿ ಮಿಂಚಿದ್ದಾರೆ. ತಿರುಮಲ ಕಿಶೋರ್ ಅವರು ನಿರ್ದೇಶನ ಮಾಡಿದ್ದು, ಈ ಸಿನಿಮಾ ಒಂದು ಕಂಪ್ಲೀಟ್ ಫ್ಯಾಮಿಲಿ ಎಂಟರ್​ಟೈನರ್ ಆಗಿರಲಿದೆ. ಈ ಸಿನಿಮಾದಲ್ಲಿ ನಾಯಕ ಶರ್ವಾನಂದ್ ಮದುವೆ ಆಗೋಕೆ ಪ್ರಯತ್ನಿಸುತ್ತಿರುತ್ತಾನೆ. ಆದರೆ, ಅದು ಸಾಧ್ಯವಾಗಲ್ಲ. ಇದೇ ಸಿನಿಮಾದ ಹೈಲೈಟ್ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ, ಈ ಸಿನಿಮಾದ ಡಿಜಿಟಲ್ ಮತ್ತು ಸ್ಯಾಟಲೈಟ್ ಹಕ್ಕುಗಳನ್ನು ಸೋನಿ ಲಿವ್ ಖರೀದಿಸಿದ್ದು, ಸಿನಿಮಾ ತಂಡಕ್ಕೆ ಬರೋಬ್ಬರಿ 25 ಕೋಟಿ ರೂ.ಗಳನ್ನು ನೀಡದೆ ಎನ್ನಲಾಗಿದೆ. ಅಂದಹಾಗೆ, ‘ಆಡವಾಳ್ಳು ಮೀಕು ಜೋಹಾರ್ಲು' ಇದೇ ಫೆಬ್ರವರಿ 25ಕ್ಕೆ ತೆರೆಕಾಣಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net