ಕಾಸ್ಟಿಂಗ್​ ಕೌಚ್​ ಬಗ್ಗೆ ರಣವಿಕ್ರಮನ ಬೆಡಗಿ ಕೊಟ್ರು ಶಾಕಿಂಗ್​ ಸ್ಟೇಟ್​ಮೆಂಟ್​!

Adha Sharma
Published on

ಮುಂಬೈ: ಸಿನಿಮಾ ರಂಗದಲ್ಲಿ ಕಾಸ್ಟಿಂಗ್​ ಕೌಚ್(ಪಾತ್ರಕ್ಕಾಗಿ ಪಲ್ಲಂಗ)​ ಒಂದು ಪೆಡಂಭೂತವಾಗಿದೆ. ಸಾಕಷ್ಟು ನಟಿಯರು ಈಗಾಗಲೇ ಮೀಟೂ ಅಭಿಯಾನದಡಿ ತಮಗಾದ ಕಹಿ ಅನುಭವಗಳನ್ನು ಹೊರಗೆಡವಿದ್ದಾರೆ. ಇದೀಗ ಬಹುಭಾಷ ತಾರೆ ಆದ ಅದಾ ಶರ್ಮಾ ಕೂಡ ಕಾಸ್ಟಿಂಗ್​ ಕೌಚ್​ ಬಗ್ಗೆ ತುಟಿಬಿಚ್ಚಿದ್ದಾರೆ.

ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಅದಾ ಶರ್ಮಾ, ಕಾಸ್ಟಿಂಗ್​ ಕೌಚ್​ ಎಂಬುದು ಕೇವಲ ಉತ್ತರ-ದಕ್ಷಿಣ ಭಾರತ ಚಿತ್ರರಂಗಕ್ಕೆ ಮಾತ್ರ ಸೀಮಿತವಲ್ಲ. ಈ ಬಗ್ಗೆ ಜಗತ್ತಿನಾದ್ಯಂತ ಮಾತನಾಡುತ್ತಾರೆ. ಹೀಗಾಗಿ ಇದು ಜಾಗತಿಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್​ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲು ಅಭಿನಯಿಸಿರುವ ಅದಾ, ಯಾವಾಗಲೂ ಒಂದು ಆಯ್ಕೆ ಇದ್ದೇ ಇರುತ್ತದೆ. ಮಂಚದ ಮೇಲೆ ಬಯಸಿದರೆ ಕುಳಿತುಕೊಳ್ಳಬಹುದು, ಮಲಗಿಕೊಳ್ಳಬಹುದು, ನಿಲ್ಲಲುಬಹುದು ಹಾಗೂ ಏನನ್ನು ಮಾಡಲು ಬಯಸಿದರೆ ಸುಮ್ಮನ್ನೇ ನೆಲದ ಮೇಲೆ ಕುಳಿತುಕೊಳ್ಳಬಹುದು ಎಂದು ಕಾಸ್ಟಿಂಗ್​ ಕೌಚ್​ ಕುರಿತು ಮಾರ್ಮಿಕವಾಗಿ ಮಾತನಾಡಿದರು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ಅದಾ ಅವರು ಕೊನೆಯದಾಗಿ ಬೈಪಾಸ್​ ರೋಡ್​ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಮ್ಯಾನ್​ ಟು ಮ್ಯಾನ್​ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕರೊನಾ ಲಾಕ್​ಡೌನ್​ ಸಮಯದಲ್ಲಿ ಅಡುಗೆ ಕೆಲಸ ಸೇರಿದಂತೆ ಮನೆ ಕೆಲಸ ಮಾಡಿ ಅದಾ ಸುದ್ದಿಯಾಗಿದ್ದರು. ಇನ್ನು ಕನ್ನಡ ಚಿತ್ರರಂಗಕ್ಕೂ ಅದಾ ಪರಿಚಿತರಾಗಿದ್ದಾರೆ. ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಪ್ರಮುಖ ನಾಯಕಿಯಾಗಿ ಅಭಿನಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net