ಮೌನಿ ರಾಯ್- ದಿಶಾ ಪಟಾನಿ ನಡುವೆ ಸಲಿಂಗಕಾಮ ಸಂಬಂಧವಿದೆಯೇ? ಸೂರಜ್ ನಂಬಿಯಾರ್ ಹೇಳಿಕೆ ವೈರಲ್​... Mouni Roy

ಮೌನಿ ರಾಯ್- ದಿಶಾ ಪಟಾನಿ ನಡುವೆ ಸಲಿಂಗಕಾಮ ಸಂಬಂಧವಿದೆಯೇ? ಸೂರಜ್ ನಂಬಿಯಾರ್ ಹೇಳಿಕೆ ವೈರಲ್​... Mouni Roy
ಮೌನಿ ರಾಯ್- ದಿಶಾ ಪಟಾನಿ ನಡುವೆ ಸಲಿಂಗಕಾಮ ಸಂಬಂಧವಿದೆಯೇ? ಸೂರಜ್ ನಂಬಿಯಾರ್ ಹೇಳಿಕೆ ವೈರಲ್​... Mouni Roy
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ
  • ತಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಪ್ರತ್ಯೇಕವಾಗುವ ನಿರ್ಧಾರ ತೆಗೆದುಕೊಂಡಿರುವುದಾಗಿ ಸೂರಜ್ ಸ್ಪಷ್ಟನೆ
  • ವಿಚ್ಛೇದನದ ವಿಷಯಕ್ಕೆ ಯಾವುದೇ ಸಂಬಂಧವಿಲ್ಲದ ತಮ್ಮ ಸ್ನೇಹಿತರನ್ನು ಹಾಗೂ ಪರಿಚಯಸ್ಥರನ್ನು ಎಳೆದು ತರಬೇಡಿ ಎಂದ ಸೂರಜ್
  • ಸದ್ಯ ಹರಿದಾಡುತ್ತಿರುವ ವದಂತಿಗಳೆಲ್ಲ ಆಧಾರರಹಿತ ಎಂದು ಆಕ್ರೋಶ ಹೊರ ಹಾಕಿದ ಸೂರಜ್​ ನಂಬಿಯಾರ್​
Mouni Roy : ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಅವರ ಪತಿ ಸೂರಜ್ ನಂಬಿಯಾರ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಈ ಎಲ್ಲಾ ಚರ್ಚೆಗಳಿಗೆ ಸ್ವತಃ ಸೂರಜ್ ನಂಬಿಯಾರ್ ಅವರೇ ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಪ್ರತ್ಯೇಕವಾಗುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಬಹಿರಂಗಪಡಿಸಿರುವ ಸೂರಜ್, ಈ ವಿಚ್ಛೇದನದ ವಿಷಯಕ್ಕೆ ಯಾವುದೇ ಸಂಬಂಧವಿಲ್ಲದ ತಮ್ಮ ಸ್ನೇಹಿತರನ್ನು ಹಾಗೂ ಪರಿಚಯಸ್ಥರನ್ನು ಅನಗತ್ಯವಾಗಿ ಎಳೆದು ತರಬೇಡಿ ಮತ್ತು ಅವರ ಹೆಸರನ್ನು ಇಂತಹ ಸುದ್ದಿಗಳೊಂದಿಗೆ ತಳುಕು ಹಾಕಬೇಡಿ ಎಂದು ಮಾಧ್ಯಮಗಳು ಹಾಗೂ ಜನರಲ್ಲಿ ವಿನಂತಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ವಿಚ್ಛೇದನದ ಹಿಂದೆ ಖ್ಯಾತ ನಟಿ ದಿಶಾ ಪಟಾನಿ ಅವರ ಹೆಸರನ್ನು ತಳುಕು ಹಾಕಿ ಕೆಲ ಮಾಧ್ಯಮಗಳು ವಿಕೃತ ಸುದ್ದಿಯೊಂದನ್ನು ಹರಡಿವೆ. ಮೌನಿ ರಾಯ್ ಮತ್ತು ದಿಶಾ ಪಟಾನಿ ನಡುವೆ ಸಲಿಂಗಕಾಮ ಸಂಬಂಧವಿದ್ದು, ಇದನ್ನು ಕಣ್ಣಾರೆ ಕಂಡ ಸೂರಜ್ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಹಾಗೂ ವಿಚ್ಛೇದನಕ್ಕಾಗಿ ಮೌನಿ ರಾಯ್ ಬರೋಬ್ಬರಿ 100 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದಾರೆ ಎಂಬ ಸುದ್ದಿಗಳು ಹರಿದಾಡಿವೆ. ಆದರೆ, ಇದೆಲ್ಲಾ ಆಧಾರರಹಿತ ವದಂತಿಗಳೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸೂರಜ್ ನಂಬಿಯಾರ್, ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ತಿರುಗೇಟು ನೀಡಿದ್ದಾರೆ.
ನಮ್ಮ ಪ್ರತ್ಯೇಕತೆಯ ಬಗ್ಗೆ ಇತ್ತೀಚೆಗೆ ಹರಡುತ್ತಿರುವ ವರದಿಗಳು ಅತ್ಯಂತ ಕೆಟ್ಟ ಉದ್ದೇಶದಿಂದ ಕೂಡಿದ್ದು, ಸಂಪೂರ್ಣ ಸುಳ್ಳಾಗಿವೆ. ನಮ್ಮ ನಡುವೆ ಯಾವುದೇ ಜೀವನಾಂಶದ ಬೇಡಿಕೆಯಾಗಲಿ, ಜಗಳಗಳಾಗಲಿ ಅಥವಾ ಮೂರನೇ ವ್ಯಕ್ತಿಯ ಹಸ್ತಕ್ಷೇಪವಾಗಲಿ ಇಲ್ಲ. ನಾನು ಮತ್ತು ಮೌನಿ ಇಬ್ಬರೂ ಪರಸ್ಪರ ಗೌರವದಿಂದಲೇ ಒಟ್ಟಾಗಿ ಪ್ರತ್ಯೇಕವಾಗುವ ನಿರ್ಧಾರ ಮಾಡಿದ್ದೇವೆ, ಇದೊಂದೇ ಸತ್ಯ. ಮಾಧ್ಯಮಗಳು ಯಾವುದೇ ಪರಿಶೀಲನೆ ನಡೆಸದೆ ಕಟ್ಟುಕಥೆಗಳನ್ನು ಸೃಷ್ಟಿಸಿ ನಮ್ಮ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಿವೆ. ನಾವಿಬ್ಬರೂ ಶಾಂತಿಯುತವಾಗಿ ಮುಂದಿನ ಜೀವನ ಸಾಗಿಸಲು ನಮಗೆ ಸ್ವಲ್ಪ ಖಾಸಗಿತನವನ್ನು ಕೊಡಿ ಎಂದು ಸೂರಜ್ ಮಾಧ್ಯಮಗಳಲ್ಲಿ ವಿನಂತಿಸಿದ್ದಾರೆ.
ನಟಿ ಮೌನಿ ರಾಯ್ ಮತ್ತು ಮಲಯಾಳಿ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರ ಪರಿಚಯವಾಗಿದ್ದು ದುಬೈನಲ್ಲಿ ನಡೆದ 2018ರ ಹೊಸ ವರ್ಷದ ಪಾರ್ಟಿಯೊಂದರಲ್ಲಿ. ವರ್ಷಗಳಿಂದ ವಿದೇಶದಲ್ಲೇ ನೆಲೆಸಿದ್ದ ಸೂರಜ್ ಅವರಿಗೆ ಆರಂಭದಲ್ಲಿ ಮೌನಿ ರಾಯ್ ಇಷ್ಟೊಂದು ಪ್ರಸಿದ್ಧ ನಟಿ ಎಂಬ ವಿಷಯವೇ ತಿಳಿದಿರಲಿಲ್ಲವಂತೆ. ಆ ಬಳಿಕ ಇವರಿಬ್ಬರ ನಡುವೆ ಪ್ರೀತಿ ಚಿಗುರಿ, ಕೆಲವು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಆರಂಭದಲ್ಲಿ ತಮ್ಮ ಸಂಬಂಧವನ್ನು ಗೌಪ್ಯವಾಗಿಟ್ಟಿದ್ದ ಈ ಜೋಡಿಯ ಪ್ರೇಮ ಕತೆ, ಜಗತ್ತಿಗೆ ತಿಳಿದಿದ್ದು ಕೋವಿಡ್ ಲಾಕ್‌ಡೌನ್ ಸಮಯದಲ್ಲಿ. ಆ ವೇಳೆ ಮೌನಿ ರಾಯ್ ದುಬೈನಲ್ಲಿ ಸೂರಜ್ ಜೊತೆ ಹೆಚ್ಚು ಸಮಯ ಕಳೆದಿದ್ದು ಭಾರಿ ಸುದ್ದಿಯಾಗಿತ್ತು.
ಅದರಂತೆ, ಈ ಜೋಡಿ 2022, ಜನವರಿ 27ರಂದು ಗೋವಾದಲ್ಲಿ ಅತ್ಯಂತ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಕೇವಲ ಆಪ್ತ ಬಂಧುಗಳು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನಡೆದ ಇವರ ವಿವಾಹ ಮಹೋತ್ಸವವು ಬಂಗಾಳಿ ಮತ್ತು ಮಲಯಾಳಂ ಉಭಯ ಸಂಪ್ರದಾಯಗಳ ಸಮ್ಮಿಲನದಂತೆ ನಡೆದಿತ್ತು. ಪ್ರಸ್ತುತ ದುಬೈ ಮೂಲದ ಯಶಸ್ವಿ ಉದ್ಯಮಿಯಾಗಿರುವ ಸೂರಜ್ ನಂಬಿಯಾರ್ ಹಾಗೂ 'ನಾಗಕನ್ನಿಕೆ' ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿರುವ ಮೌನಿ ರಾಯ್ ಅವರ ಈ ಸುಂದರ ದಾಂಪತ್ಯ ಇದೀಗ ಮುರಿದುಬಿದ್ದಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆಮ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net