ಪ್ರೀತಿಯಿಂದ ತುಂಬಿರುವಾಗ... ನಟ ವಿಜಯ್​ ಜತೆಗಿನ ಸಂಬಂಧದ ಬಗ್ಗೆ ತ್ರಿಷಾ ಹಂಚಿಕೊಂಡ ಪೋಸ್ಟ್ ವೈರಲ್! Actress Trisha

Actress Trisha
Published on

Actress Trisha : ಕಾಲಿವುಡ್ ಸೂಪರ್​ ಸ್ಟಾರ್ ವಿಜಯ್ ಹಾಗೂ ಸ್ಟಾರ್​ ನಟಿ ತ್ರಿಷಾ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೆಲವು ವರ್ಷಗಳಿಂದ ಹರಡುತ್ತಿರುವುದು ಎಲ್ಲರಿಗೂ ತಿಳಿದಿದೆ. ಅದಕ್ಕೆ ಪುಷ್ಟಿ ನೀಡುವಂತೆ ಕೆಲ ಘಟನೆಗಳೂ ನಡೆದಿವೆ. ಆದರೆ, ವಿಜಯ್​ ಆಗಲಿ ತ್ರಿಷಾ ಆಗಲಿ ಈ ಬಗ್ಗೆ ಒಮ್ಮೆಯೂ ಪ್ರತಿಕ್ರಿಯೆ ನೀಡಿಲ್ಲ.

ಸದ್ಯ ಇಬ್ಬರು ತಮ್ಮ ವೃತ್ತಿಜೀವನದಲ್ಲಿ ಬ್ಯುಸಿಯಾಗಿರುವುದರಿಂದ, ಇತ್ತೀಚೆಗೆ ಅಂತಹ ವದಂತಿಗಳು ಕೇಳಿಬಂದಿಲ್ಲ. ಆದರೆ, ಇತ್ತೀಚೆಗೆ ಅಂದರೆ, ವಿಜಯ್ ಅವರ ಹುಟ್ಟುಹಬ್ಬದ ದಿನದಂದು ತ್ರಿಷಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡು ಶುಭ ಹಾರೈಸಿದರು. ‘ಹ್ಯಾಪಿ ಬರ್ತ್ಡೇ ಟು ದಿ ಬೆಸ್ಟ್’ ಎಂದು ಶೀರ್ಷಿಕೆ ನೀಡಿ ವಿಜಯ್ ತಮ್ಮ ಪಕ್ಕದಲ್ಲಿ ಕುಳಿತು ತನ್ನ ಸಾಕು ನಾಯಿಯೊಂದಿಗೆ ಆಟವಾಡುತ್ತಿರುವ ಫೋಟೋವನ್ನು ತ್ರಿಷಾ ಪೋಸ್ಟ್ ಮಾಡಿದ್ದರು.

ಫೋಟೋ ನೋಡಿದರೆ ವಿಜಯ್ ಅವರು ತ್ರಿಷಾ ಮನೆಯಲ್ಲಿ ಇರುವಂತೆ ಕಾಣುತ್ತೆ. ಆದರೆ ಇದು ಈಗಿನ ಫೋಟೋನಾ? ಅಥವಾ ಹಳೆಯ ಫೋಟೋನಾ? ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅಭಿಮಾನಿಗಳು ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಕಾಮೆಂಟ್​ ಮಾಡಲು ಶುರು ಮಾಡಿದರು. ಫೋಟೋ ವೈರಲ್​ ಆಗುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲೂ ವಿಜಯ್​ ಮತ್ತು ತ್ರಿಷಾ ಬಗ್ಗೆ ಮಾತನಾಡಿಕೊಳ್ಳಲು ಶುರು ಮಾಡಿದರು.

ಮಲದಿಂದ ತುಂಬಿರುವ ಮಂದಿ

ಇತ್ತೀಚೆಗೆ ತ್ರಿಷಾ ಅವರು ಈ ಎಲ್ಲ ವದಂತಿಗಳಿಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ "ನೀವು ಪ್ರೀತಿಯಿಂದ ತುಂಬಿರುವಾಗ, ಅದು ಮಲದಿಂದ ತುಂಬಿರುವ ಜನರನ್ನು ಗೊಂದಲಗೊಳಿಸುತ್ತದೆ" ಎಂದು ಬರೆದಿದ್ದಾರೆ. ಈ ಮೂಲಕ ವದಂತಿಗಳನ್ನು ಹರಡುತ್ತಿರುವವರಿಗೆ ತಿರುಗೇಟು ನೀಡಿದ್ದಾರೆ. ಆದರೆ, ತ್ರಿಷಾ ಅವರ ಪೋಸ್ಟ್ ಮತ್ತೆ ವೈರಲ್ ಆಗಿದ್ದು, ವಿಜಯ್ ಅವರೊಂದಿಗಿನ ತಮ್ಮ ಪ್ರೀತಿಯನ್ನು ಅವರು ದೃಢಪಡಿಸಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

trisha 1

ಇನ್ನು ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವಿಜಯ್ ‘ಜನ ನಾಯಗನ್’ ಸಿನಿಮಾ ಮಾಡುತ್ತಿದ್ದಾರೆ. ಇದು ಅವರ ಕೊನೆಯ ಸಿನಿಮಾ. ಏಕೆಂದರೆ, ವಿಜಯ್​ ಅವರು ರಾಜಕೀಯ ಪ್ರವೇಶಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಸ್ಪರ್ಧಿಸಲಿದೆ.

ತ್ರಿಷಾ ಬಗ್ಗೆ ಹೇಳುವುದಾದರೆ, 40 ವರ್ಷ ದಾಟಿದರೂ ತ್ರಿಷಾ ಅವರಿನ್ನೂ ಮದುವೆಯಾಗಿಲ್ಲ. ಈ ಹಿಂದೆ ಒಮ್ಮೆ ಉದ್ಯಮಿಯೊಬ್ಬರನ್ನು ಮದುವೆಯಾಗಲು ಹೋಗಿದ್ದರು ಆದರೆ, ಕಾರಣಾಂತರಗಳಿಂದ ಅದು ರದ್ದಾಗಿತ್ತು. ಚಿತ್ರರಂಗದಿಂದ ತ್ರಿಷಾ ದೂರ ಸರಿದರು ಅನ್ನೋ ಮಾತುಗಳು ಕೇಳು ಬರುವಾಗಲೇ ’96’ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳಿದರು. ನಂತರ, ಅವರು ‘ಪೊನ್ನಿಯಿನ್ ಸೆಲ್ವನ್’ ಎರಡು ಭಾಗಗಳಲ್ಲಿ ಮತ್ತು ಲಿಯೋ, ವಿದಾಮುಯರ್ಚಿ ಹಾಗೂ ಗುಡ್​ ಬ್ಯಾಡ್​ ಅಗ್ಲಿಯಂತಹ ಕ್ರೇಜಿ ಸಿನಿಮಾಗಳನ್ನು ಮಾಡಿದರು. ಪ್ರಸ್ತುತ, ಅವರು ಚಿರಂಜೀವಿ ಅವರ ‘ವಿಶ್ವಂಭರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net