ನಮ್ಮನ್ನೇ ಯಾಕೆ ಕೇಳ್ತೀರಿ?; ಏನೂ ಮಾಡ್ತಿಲ್ಲ ಎಂದವರಿಗೆ ತಮನ್ನಾ ಪ್ರಶ್ನೆ..

Thamanna
Published on

ಪ್ರಕೃತಿ ವಿಕೋಪ ಅಥವಾ ನೈಸರ್ಗಿಕ ವಿಪತ್ತುಗಳಾದಾಗ ಜನ ಮೊದಲಿಗೆ ಪ್ರಶ್ನೆ ಮಾಡುವುದು ಸೆಲೆಬ್ರಿಟಿಗಳನ್ನು. ಅಂತಹ ಸಂದರ್ಭದಲ್ಲಿ ಅವರೆಷ್ಟು ಸಹಾಯ ಮಾಡಿದ್ದಾರೆ, ಏನು ಕೊಟ್ಟಿದ್ದಾರೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಕೇಳಿಬರುತ್ತವೆ. ಲಾಕ್​ಡೌನ್ ಸಮಯದಲ್ಲೂ ಇದು ಮುಂದುವರೆದಿದ್ದು, ಯಾರ್ಯಾರು ಏನೇನು ಸಹಾಯ ಮಾಡಿದ್ದಾರೆ ಎಂಬ ಲೆಕ್ಕಾಚಾರಗಳು ನಡೆಯುತ್ತಲೇ ಇದೆ. ಇಂಥ ಪ್ರಶ್ನೆಗಳನ್ನು ಸೆಲೆಬ್ರಿಟಿಗಳಿಗೇ ಯಾಕೆ ಕೇಳಲಾಗುತ್ತದೆ ಎಂದು ಟಾಲಿವುಡ್ ನಟಿ ತಮನ್ನಾ ಭಾಟಿಯಾ ಪ್ರಶ್ನಿಸಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಪ್ರತಿಬಾರಿ ಏನಾದರೂ ಆದಾಗಲೂ ಸಿನಿಮಾದವರ ಕೊಡುಗೆ ಬಗ್ಗೆ ಪ್ರಶ್ನೆ ಎತ್ತಲಾಗುತ್ತದೆ. ಕಲಾವಿದರು ಮಾತ್ರ ಯಾಕೆ ಪ್ರತಿ ಬಾರಿ ತಮ್ಮ ಒಳ್ಳೆಯತನವನ್ನು ಸಾಬೀತು ಪಡಿಸುತ್ತಲೇ ಇರಬೇಕು ಎಂಬುದು ನನಗೆ ಅರ್ಥವಾಗುವುದಿಲ್ಲ. ಕಲಾವಿದರ ಮೇಲೆ ಈ ವಿಷಯದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು, ಅವರು ತಮ್ಮ ಒಳ್ಳೆಯತನವನ್ನು ಸಾಬೀತುಪಡಿಸುವುದಕ್ಕೆ ದಾನ ಮಾಡಬೇಕಾಗುತ್ತಿದೆ ಮತ್ತು ಆ ನಂತರ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೋಆಫ್ ಮಾಡಬೇಕಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net