ಮೂರು ಮನೆಗಳನ್ನು ಅಡವಿಟ್ಟು, ಇನ್ನೊಂದು ಮನೆ ಬಾಡಿಗೆಗೆ ಕೊಟ್ಟ ನಟಿ ತಮನ್ನಾ...

1
Published on

ಕನ್ನಡದ "ಜಾಗ್ವಾರ್​' ಮತ್ತು "ಕೆಜಿಎ್​' ಚಿತ್ರಗಳಲ್ಲಿ ಸ್ಪೆಷಲ್​ ಸಾಂಗ್​ಗಳಲ್ಲಿ ಮಿಂಚಿರುವ, 70ಕ್ಕೂ ಅಧಿಕ ಸಿನಿಮಾಗಳಲ್ಲಿ, ನಾಲ್ಕೆ$ದು ಒಟಿಟಿ ವೆಬ್​ಸರಣಿಗಳಲ್ಲಿ ನಟಿಸಿರುವ ಖ್ಯಾತಿ ಬಹುಭಾಷಾ ನಟಿ ತಮನ್ನಾ ಭಾಟಿಯಾಗೆ ಸಲ್ಲುತ್ತದೆ. ಇಂತಹ ತಮನ್ನಾ ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ನಟ ವಿಜಯ್​ ವರ್ಮಾ ಜತೆಗಿನ ಓಡಾಟದಿಂದ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅದರ ನಡುವೆಯೇ ಕಳೆದ ತಿಂಗಳು ಅವರು ಮುಂಬೈನ ಮೂರು ಆಸ್ತಿಗಳನ್ನು ಅಡವಿಟ್ಟಿದ್ದಾರೆ ಎಂಬ ಸುದ್ದಿಯೊಂದು ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

ಅಂಧೇರಿ ಪಶ್ಚಿಮದ ಲೋಖಂಡ್ವಾಲಾ ಕಾಂಪ್ಲೆಕ್ಸ್​ನಲ್ಲಿರುವ 2,595 ಚದರಡಿಯ ಮೂರು ಪ್ಲ್ಯಾಟ್​ಗಳನ್ನು 7.84 ಕೋಟಿ ರೂ.ಗೆ ತಮನ್ನಾ ಅಡವಿಟ್ಟಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಅವರು 4.7 ಲಕ್ಷ ರೂ. ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ ಎನ್ನಲಾಗಿದೆ. ಹಾಗೇ ಪ್ರತಿಷ್ಠಿತ ಜುಹೂನ ತಾರಾ ರಸ್ತೆಯಲ್ಲಿರುವ ವೆಸ್ಟರ್ನ್​ ವಿಂಡ್​ ಕಟ್ಟಡದಲ್ಲಿರುವ 6065 ಚದರ ಅಡಿಯ ಕಚೇರಿಯನ್ನು ನಾನಾವತಿ ಕನ್ಸ್​ಟ್ರಕ್ಷನ್​ ಸಂಸ್ಥೆಗೆ ಐದು ವರ್ಷಗಳ ಕಾಲ ಬಾಡಿಗೆಗೆ ನೀಡಿದ್ದಾರೆ ಎನ್ನಲಾಗಿದೆ.

ವಾಣಿಜ್ಯ ಉದ್ದೇಶಕ್ಕಾಗಿ ಬಳಕೆಯಾಗಲಿರುವ ಆ ಕಚೇರಿಯಿಂದ ತಮನ್ನಾ ಪ್ರತಿ ತಿಂಗಳು 18 ಲಕ್ಷ ರೂ. ಬಾಡಿಗೆ ಪಡೆಯಲಿದ್ದು, ನಾಲ್ಕು ಮತ್ತು ಐದನೇ ವರ್ಷ ಬಾಡಿಗೆಯು 20.16 ಲಕ್ಷ ರೂ. ಮತ್ತು 20.96 ಲಕ್ಷ ರೂ.ಗೆ ಏರಲಿದೆ ಎನ್ನಲಾಗಿದೆ. ಇತ್ತೀಚೆಗಷ್ಟೆ "ಅರಣ್​ಮನೈ 4' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ತಮನ್ನಾ ಸದ್ಯ "ವೇದಾ', "ಸ್ತ್ರೀ 2' ಮತ್ತು "ಓಡೆಲಾ 2' ಚಿತ್ರಗಳಲ್ಲಿ ಬಿಜಿಯಿದ್ದಾರೆ. -ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net