ನಿಶಾಳನ್ನು ದತ್ತು ಪಡೆದ ಸನ್ನಿ ಲಿಯೋನ್ ಗರಂ!

Sunny
Published on

‘ನೀವು ನಿಶಾ ಹೆಸರಿನ ಮಗುವನ್ನು ದತ್ತು ಪಡೆದಿದ್ದು ಪ್ರಚಾರಕ್ಕೋಸ್ಕರ’- ಟ್ರೋಲಿಗರ ಹೀಗೊಂದು ಕಮೆಂಟ್​ನಿಂದ ನಟಿ ಸನ್ನಿ ಲಿಯೋನ್ ಗರಂ ಆಗಿದ್ದಾರೆ. ಜಾಲತಾಣದಲ್ಲಿ ಹರಿದಾಡಿದ ಸುದ್ದಿಗಳಿಗೆ ಮಾತಿನಲ್ಲೇ ಉತ್ತರ ನೀಡಿದ್ದಾರೆ.

‘ಕೇವಲ ಒಂದು ಫೋಟೋ ಅಥವಾ ವಿಡಿಯೋ ನನ್ನನ್ನು ವಿಚಲಿತಳಾಗಿ ಮಾಡುವುದಿಲ್ಲ. ಮಕ್ಕಳ ಪಾಲನೆ, ಪೋಷಣೆ ನನಗೂ ಗೊತ್ತಿದೆ. ಅದನ್ನು ನೀವು ಈ ರೀತಿಯಲ್ಲೇಕೆ ಅಳೆಯುತ್ತೀರಿ. ನಿಜಕ್ಕೂ ಇದು ಹಾಸ್ಯಾಸ್ಪದ. ನಿಶಾ ನಮ್ಮ ಮನೆಯ ರಾಜಕುಮಾರಿ’ ಎಂದಿದ್ದಾರೆ. ದತ್ತು ಮಗಳನ್ನು ಬಿಟ್ಟು ಬಾಡಿಗೆ ತಾಯ್ತನದ ಮೂಲಕ ಪಡೆದ ಇನ್ನಿಬ್ಬರು ಮಕ್ಕಳನ್ನು ಎತ್ತಿಕೊಂಡು ಮೆಟ್ಟಿಲು ಏರಿದ ವಿಡಿಯೋಕ್ಕೆ ನೆಟ್ಟಿಗರು, ಈ ರೀತಿ ಪ್ರತಿಕ್ರಿಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net