ಸ್ಯಾಂಡಲ್ವುಡ್ ಚಿರತರುಣಿ ಎಂದೇ ಕರೆಸಿಕೊಳ್ಳುವ ನಟಿ ಸುಮನ್ ರಂಗನಾಥನ್ ಇಂದು 46ನೇ ವಸಂತಕ್ಕೆ ಕಾಲಿರಿಸಿದ್ದಾರೆ. 1989ರಲ್ಲಿ ಸಿಬಿಐ ಶಂಕರ್ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದ ಸುಮನ್, ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಬಾಲಿವುಡ್ನಲ್ಲಿಯೂ ಸುಮನ್ ನಟಿಸಿ ಬಂದಿದ್ದಾರೆ. ಭೋಜಪುರಿ ಸಿನಿಮಾ ಸಹ ಇವರ ಬತ್ತಳಿಕೆಯಲ್ಲಿದೆ. ಸದ್ಯ ಸ್ಯಾಂಡಲ್ವುಡ್ನಲ್ಲಿಯೇ ಹೆಚ್ಚು ಸಕ್ರಿಯರಾಗಿರುವ ಸುಮನ್, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.