ಪುಸ್ತಕ ಬರೀತಾರಂತೆ ಶ್ವೇತಾ; ಜನರಿಗೆ ಸ್ಫೂರ್ತಿ ತುಂಬಲು ಹೊಸ ಪುಸ್ತಕ..

Shwetha
Published on

ಬೆಂಗಳೂರು: ಶ್ವೇತಾ ಶ್ರೀವಾತ್ಸವ್ ನಟಿಯಾಗಿ ಎಲ್ಲರಿಗೂ ಗೊತ್ತು. ಈಗ ಅವರು ಜನರಿಗೆ ಸ್ಪೂರ್ತಿ ತುಂಬುವುದಕ್ಕೆ ಹೊರಟಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ವಿಷಯವೇನೆಂದರೆ, ಅವರು ಈಗ ಒಂದು ಪುಸ್ತಕ ಬರೆಯುತ್ತಿದ್ದಾರಂತೆ. ಆ ಪುಸ್ತಕದ ಮೂಲಕ ಒಂದಿಷ್ಟು ಜನರಿಗೆ ಸ್ಪೂರ್ತಿ ತುಂಬುವುದಕ್ಕೆ ಹೊರಟಿದ್ದಾರಂತೆ.

ಇಷ್ಟಕ್ಕೂ ಶ್ವೇತಾ ಯಾವ ವಿಷಯದ ಕುರಿತು ಪುಸ್ತಕ ಬರೆಯುತ್ತಿರಬಹುದು ಎಂಬ ಪ್ರಶ್ನೆ ಸಹಜವೇ. ಶ್ವೇತಾ ಚಿತ್ರರಂಗಕ್ಕೆ ಬಂದಿದ್ದು ಮದುವೆಯ ನಂತರ. ಸಾಮಾನ್ಯವಾಗಿ ಮದುವೆಯ ನಂತರ ನಟಿಯರಿಗೆ ನಾಯಕಿಯರಾಗಿ ಅವಕಾಶ ಸಿಗುವುದಿಲ್ಲ ಎಂಬ ಮಾತಿರುವಾಗ, ಶ್ವೇತಾ ನಾಯಕಿಯಾಗಿ ನಟಿಸಿದರು. ಈಗ ತಮ್ಮದೇ ಕಥೆಯನ್ನು ಅವರು ಈ ಪುಸ್ತಕದ ಮೂಲಕ ಹೇಳುವುದಕ್ಕೆ ಮುಂದಾಗಿದ್ದಾರೆ.

ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಅವರು, ‘ಮದುವೆಯಾದ ನಂತರ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸುವ ನನ್ನ ಕನಸನ್ನು ನನಸು ಮಾಡಿಕೊಳ್ಳುವ ಹಾದಿಯ ಬಗ್ಗೆ ಒಂದು ಪುಸ್ತಕ ಬರೆಯುತ್ತಿದ್ದೇನೆ. ಇದರಿಂದ ಯಾರಿಗಾದರೂ ಸ್ಪೂರ್ತಿ ಸಿಗಬಹುದೇನೋ ಎಂಬುದು ಮುಖ್ಯ ಉದ್ದೇಶ’ ಎಂದು ಶ್ವೇತಾ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕುರಿತು ಯಾರಿಗಾದರೂ ಏನಾದರೂ ಪ್ರಶ್ನೆಗಳಿದ್ದರೆ ಅದನ್ನು ಇಮೇಲ್ ಮಾಡಿ ಎಂದು ಸಹ ಕೇಳಿಕೊಂಡಿದ್ದಾರೆ. ಆಸಕ್ತಿದಾಯಕ ಪ್ರಶ್ನೆಗಳಿಗೆ ಉತ್ತರಿಸಿ, ಪುಸ್ತಕದಲ್ಲಿ ಪ್ರಕಟಿಸಲಾಗುತ್ತದಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net