ನೊಂದ ಮೂಗಿನ ಕಥೆ; ಸರ್ಜರಿ ಬಗ್ಗೆ ಮೌನ ಮುರಿದ ಶ್ರುತಿ ಹಾಸನ್

Shruthi Hariharan
Published on

ಸಿನಿಮಾ ನಟಿಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ಇನ್ನಷ್ಟು ಮುದ್ದಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲು, ಕೆನ್ನೆ, ಮೂಗು, ದವಡೆ, ಹುಬ್ಬುಗಳ ಸರ್ಜರಿ ಮಾಡಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ಆ ಬಗ್ಗೆ ಧೈರ್ಯದಿಂದ ಹೇಳಿಕೊಳ್ಳುವುದು ಅಷ್ಟು ಕಾಮನ್ ಅಲ್ಲ. ಆದರೆ ಕಮಲ್ ಹಾಸನ್ ಪುತ್ರಿ ನಟಿ ಶ್ರುತಿ ಹಾಸನ್ ಇದೇ ಮೊದಲ ವಾರಿಗೆ ತಮ್ಮ ಮೂಗಿನ ಸರ್ಜರಿ ಬಗ್ಗೆ ಮೌನ ಮುರಿದಿದ್ದಾರೆ.

‘ಹೌದು, ನಾನು ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದೇನೆ. ಮೊದಲ ಚಿತ್ರದಲ್ಲಿ ನಾನು ನಟಿಸಿದಾಗ ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ಮೂಗಿನ ಬಗ್ಗೆಯೇ ಜನ ಮಾತನಾಡಲು ಶುರು ಮಾಡಿದಾಗ ನನಗೂ ಬೇಸರವಾಯಿತು. ಹೀಗಾಗಿ ಸರ್ಜರಿ ಮಾಡಿಸಿಕೊಂಡೆ. ನನ್ನ ಮುಖ, ನನ್ನ ಮೂಗು. ಮತ್ತಷ್ಟು ಸುಂದರವಾಗಿ ಕಾಣಿಸಿಕೊಳ್ಳಲು ನನ್ನಿಷ್ಟದಂತೆ ಮಾಡುತ್ತೇನೆ. ಹೀಗೇ ಕಾಣಿಸಿಕೊಳ್ಳಬೇಕು, ಹಾಗೇ ಇರಬೇಕು ಅಂತ ನನ್ನನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಇದು ನನ್ನ ದೇಹ. ನನಗಿಷ್ಟ ಬಂದಂತೆ ನಾನಿರುತ್ತೇನೆ. ನೀವು ಹೀಗೇ ಇರಿ, ಹಾಗೇ ಇರಿ ಅಂತ ನಾನು ಯಾರಿಗೂ ಹೇಳುತ್ತಿಲ್ಲವಲ್ಲಾ? ಶ್ರುತಿ ವಿದೇಶಿ ಮಹಿಳೆಯಂತೆ ಕಾಣುತ್ತಾರೆ. ಭಾರತೀಯ ಹುಡುಗಿಯಂತೆ ಕಾಣುವುದಿಲ್ಲ ಅಂತ ಮಾತನಾಡಿಕೊಳ್ಳುತ್ತಾರೆ. ಆದರೆ, ನಾನು ಅತಿ ಹೆಚ್ಚು ಚಿತ್ರಗಳಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ. ನನಗೇ ಒಮ್ಮೊಮ್ಮೆ ಗೊಂದಲವಾಗುತ್ತದೆ’ ಎಂದು ಹೇಳಿಕೊಂಡಿದ್ದಾರೆ ಶ್ರುತಿ ಹಾಸನ್.

ಸದ್ಯ ಶ್ರುತಿ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಚಿತ್ರದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ನಟಿಸುತ್ತಿದ್ದು, ಹಾಗೇ ‘ವಾಲ್ಟೇರ್ ವೀರಯ್ಯ’ ಚಿತ್ರದಲ್ಲಿ ರವಿತೇಜಗೆ ಜೋಡಿಯಾಗಿ ಹಾಗೂ ನಂದಮೂರಿ ಬಾಲಕೃಷ್ಣ ಅವರಿಗೆ ಜೋಡಿಯಾಗಿ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net