

ಈ ವರ್ಷದ ದೀಪಾವಳಿ ಕೊಂಚ ವಿಭಿನ್ನ. ಕರೊನಾ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆ ಬದಿಗಿಟ್ಟು, ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವಿಶೇಷ ಹಬ್ಬವನ್ನು ಚಂದನವನದ ನಟಿಯರೂ ಅಷ್ಟೇ ವಿಭಿನ್ನವಾಗಿ ಹೇಗೆ ಆಚರಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.
ದೀಪಾವಳಿ ನಮ್ಮ ಕಡೆ ತುಂಬ ಸಂಭ್ರಮ ಮತ್ತು ಸಡಗರದಿಂದ ಆಚರಿಸುವ ಹಬ್ಬ. ಈ ಹಬ್ಬಕ್ಕೆ ನಮ್ಮ ಮನೆ ಕಡೆ ಚಿನ್ನ ಖರೀದಿಸುವ ಸಂಪ್ರದಾಯ ಇರುತ್ತದೆ. ಪ್ರತಿ ಸಲದ ದೀಪಾವಳಿಗೆ ಚಿನ್ನ ಖರೀದಿ ಇದ್ದೇ ಇರುತ್ತದೆ. ಇಡೀ ಮನೆಯನ್ನು ದೀಪಗಳಿಂದ ಸಿಂಗರಿಸಲಾಗುತ್ತದೆ. ಮೊದಲಿಂದಲೂ ಪಟಾಕಿ ಹೊಡೆಯುವುದಿಲ್ಲ. ಮನೆಯ ಸಿಂಗಾರ ಮತ್ತು ರಂಗೋಲಿಯ ಉಸ್ತುವಾರಿ ನನ್ನ ಜವಾಬ್ದಾರಿ. ಈ ಹಬ್ಬಕ್ಕೆ ಕರಂಜಿ ಎಂಬ ಸ್ವೀಟ್ ತುಂಬ ಫೇಮಸ್. ಈ ಸಲ ಆ ಸಿಹಿಯನ್ನು ನಾನೇ ಮನೆಯಲ್ಲಿ ತಯಾರಿಸುತ್ತಿದ್ದೇನೆ. ಅದರ ಜತೆಗೆ ಗುಲಾಬ್ ಜಾಮೂನ್ ಸಹ ಇರುತ್ತದೆ. ಒಟ್ಟು ಮೂರು ದಿನದ ಹಬ್ಬ ಇದಾಗಿರುವುದರಿಂದ ಈಗಾಗಲೇ ಆ ಹಬ್ಬದ ಸಂಭ್ರಮ ಶುರುವಾಗಿದೆ.
| ಶಾನ್ವಿ ಶ್ರೀವಾಸ್ತವ