ಹೊಯ್ಸಳ ಸೆಟ್​ನಲ್ಲಿ ರಮ್ಯಾ..

Hoysala
Published on

ಬೆಂಗಳೂರು: ಧನಂಜಯ್ ಅಭಿನಯದ ‘ಹೊಯ್ಸಳ’ ಚಿತ್ರದ ಸೆಟ್​ಗೆ ರಮ್ಯಾ ಭೇಟಿ ಕೊಟ್ಟು ಎಲ್ಲರಿಗೂ ಸರ್​ಪ್ರೖೆಸ್ ಕೊಟ್ಟಿದ್ದಾರೆ. ಒಂದಿಷ್ಟು ಹೊತ್ತು ಚಿತ್ರತಂಡದ ಜತೆಗೆ ಸಮಯ ಕಳೆದ ರಮ್ಯಾ, ಮೇಕಿಂಗ್ ದೃಶ್ಯಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಮ್ಯಾ ಏಕಾಏಕಿ ಚಿತ್ರದ ಸೆಟ್​ಗೆ ಭೇಟಿ ನೀಡಿರುವ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.

ಪ್ರಮುಖವಾಗಿ, ರಮ್ಯಾ ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ರೀಎಂಟ್ರಿ ಕೊಡುತ್ತಿದ್ದಾರಾ? ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿದೆ. ಆದರೆ, ರಮ್ಯಾ ಇದವರೆಗೂ ಯಾವ ಚಿತ್ರದಲ್ಲೂ ನಟಿಸಿಲ್ಲ. ಈಗ ‘ಹೊಯ್ಸಳ’ ಸೆಟ್​ನಲ್ಲಿ ಅವರಿರುವುದು ನೋಡಿ, ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು ಎಂಬ ಆಸೆ ಅವರ ಅಭಿಮಾನಿಗಳಲ್ಲಿ ಚಿಗುರೊಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net